ಕರ್ನಾಟಕದ 20 ಅಧಿಕ ಜಿಲ್ಲೆಗಳಲ್ಲಿ ಸೆ.24ರವರೆಗೆ ಭಾರೀ ಮಳೆ

Ravi Talawar
ಕರ್ನಾಟಕದ 20 ಅಧಿಕ ಜಿಲ್ಲೆಗಳಲ್ಲಿ ಸೆ.24ರವರೆಗೆ ಭಾರೀ ಮಳೆ
WhatsApp Group Join Now
Telegram Group Join Now

ಬೆಂಗಳೂರು, ಸೆಪ್ಟೆಂಬರ್ 18: ಕರ್ನಾಟಕದ ಬಹುತೇಕ ಕಡೆ ಮತ್ತೆ ಮಳೆ ಶುರುವಾಗಿದೆ. ಬೆಂಗಳೂರು ಸೇರಿ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಝಲ್ಕಿ ಕ್ರಾಸ್, ಸಿಂದಗಿ, ಮಂಠಾಳ, ಗಾಣಗಾಪುರ, ಚಿಕ್ಕೋಡಿ, ಆಳಂದ, ಆಗುಂಬೆ, ಅಫ್ಝಲ್​ಪುರ, ರಾಯಲ್ಪಾಡು, ಇಳಕಲ್, ದೇವರಹಿಪ್ಪರಗಿ, ಮಸ್ಕಿ, ಕುಷ್ಟಗಿ, ಕಕ್ಕೇರಿ, ಇಂಡಿ, ಹೊನ್ನಾವರ, ಭಾಲ್ಕಿ, ಬನವಾಸಿ, ಯಲಬುರ್ಗಾ,ಔರಾದ್, ಶಕ್ತಿನಗರ, ಸಿದ್ದಾಪುರ, ಶೃಂಗೇರಿ, ಕುರ್ಡಿ, ಕೊಟ್ಟಿಗೆಹಾರ, ಕೋಟಾ, ಜಯಪುರ, ಧರ್ಮಸ್ಥಳ, ಗೇರುಸೊಪ್ಪ, ಬೀದರ್, ಭದ್ರಾವತಿ, ಬರಗೂರು, ಬಸವನ ಬಾಗೇವಾಡಿ, ಅಥಣಿ, ಅಂಕೋಲಾದಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಬುಧವಾರ ರಾತ್ರಿಯಿಂದಲೇ ಮಳೆಯಾಗುತ್ತಿದೆ. ಎಚ್​​ಎಎಲ್​​ನಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,ನಗರದಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​​ನಲ್ಲಿ 29.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

WhatsApp Group Join Now
Telegram Group Join Now
Share This Article