ಬಳ್ಳಾರಿ ಮೇ 14 : ನಗರದಲ್ಲಿ ಮಧ್ಯರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಎಡೆಬಿಡದೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸಿದರು. ನಗರದ ದೊಡ್ಡನಗೌಡ ರಂಗಮಂದಿರದ ಹತ್ತಿರ ಇರುವ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ನಿಂತು ಕೌಲ್ ಬಜಾರ್ ಮತ್ತು ನಗರಕ್ಕೆ ಪ್ರಮುಖ ಕೊಂಡಿಯಂತಾದ ರೈಲ್ವೆ ಅಂಡರ್ ಪಾಸ್ ನೀರಿನಿಂದ ಕೂಡಿ ಬಂದಾಗಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಯಿತು.