ಬೆಂಗಳೂರು, ಆಗಸ್ಟ್ 05: ಕೇವಲ ಬೆಂಗಳೂರು ಮಾತ್ರವಲ್ಲ ಕರ್ನಾಟಕದ 29 ಜಿಲ್ಲೆಗಳಲ್ಲಿ ಒಂದು ವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಜಯನಗರ, ಶಿವಮೊಗ್ಗ, ರಾಮನಗರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಂಟವಾಳ, ಟಿಜಿ ಹಳ್ಳಿ, ನಾಪೋಕ್ಲು, ಮಾಣಿ, ಮಾಗಡಿ, ಕುಂದಾಪುರ, ಕಿಬ್ಬನಹಳ್ಳಿ, ಕಳಸ, ಗೋಪಾಲ್ನಗರ, ಚನ್ನರಾಯಪಟ್ಟಣ, ಭದ್ರಾವತಿ, ಬೆಂಗಳೂರು ಎಚ್ಎಎಲ್, ಉಪ್ಪಿನಂಗಡಿ, ತಿಪಟೂರು, ಸಿದ್ದಾಪುರ, ಮಂಕಿ, ಪೊನ್ನಂಪೇಟೆ, ಕುಣಿಗಲ್, ಕೊಟ್ಟಿಗೆಹಾರ, ದೇವರಹಿಪ್ಪರಗಿ, ಕ್ಯಾಸಲ್ರಾಕ್, ಬೇಳೂರು, ಆನವಟ್ಟಿಯಲ್ಲಿ ಮಳೆಯಾಗಿದೆ.