ನೇಸರಗಿ: ಸಮೀಪದ ಸುತಗಟ್ಟಿ ಗ್ರಾಮದಲ್ಲಿ ಗುರುವಾರದಂದು ಸುರಿದ ಭಾರಿ ಮಳೆಗೆ ಗ್ರಾಮದ ರಸ್ತೆಗಳಲ್ಲಿ ನೀರು ತುಂಬಿ ಬಸ್ ನಿಲ್ದಾಣದ ಹತ್ತಿರ ಎಲ್ಲ ರಸ್ತೆಗಳು ಜಲಾವ್ರತಗೊಂಡು ಜನ ತೊಂದರೆ ಅನುಭವಿಸಿದ ಘಟನೆ ನಡೆದಿದೆ. ಹಳೆಯ ಪಂಚಾಯತಿ ಮತ್ತು ಹಳೆಯ ಅಂಗಡಿಗಳಿಗೆ ನೀರು ನುಗ್ಗಿದ್ದು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೊಲದಿಂದ ಬರುವ ಧನ ಕರುಗಳು, ಚಕ್ಕಡಿ, ವಾಹನಗಳು ಸಂಚರಿಸಲು ಪರದಾಡಿದರು.