ಸಂಡೂರು:30-ತಾಲೂಕಿನ ಜುಲೈ 29 ರಂದು ಹೊಸದರೋಜಿ ಗ್ರಾಮದಲ್ಲಿ , ಸೋಮವಾರದಂದು ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್), ಹೊಸದರೋಜಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಹೊಸದರೋಜಿ ವತಿಯಿಂದ ಹಿರಿಯ ನಾಗರೀಕರಿಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಹೊಸದರೋಜಿ ಗ್ರಾಮದ ಜನರಲ್ಲೆಲ್ಲೂರು ಭಾಗವಹಿಸಿ ಆರೋಗ್ಯ ತಪಾಸಣೆ ಮತ್ತು ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು ಸದರಿ ಶಿಬಿರದಲ್ಲಿ 130 ಕ್ಕೂ ಹೆಚ್ಚಿನ ಜನರಿಗೆ ಸಕ್ಕರೆ ಖಾಯಿಲೆ ಹಾಗೂ ರಕ್ತ ಛಾಪದ ತಪಾಸಣೆ ಮಾಡಲಾಯಿತು. ಇಲ್ಲಿ ಸಕ್ಕರೆ ಕಾಯಿಲೆಗೆ 28 ಮಂದಿಗೆ. ರಕ್ತ ಛಾಪಕ್ಕೆ 19 ಮಂದಿಗೆ, ಸಂಧಿವಾತಕ್ಕೆ 46 ಮಂದಿಗೆ, ದೌರ್ಭಲ್ಯಕ್ಕೆ 29 ಮಂದಿಗೆ ಮತ್ತು 8 ಮಂದಿಗೆ ಇನ್ನಿತರೇ ರೋಗಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ನೇತ್ರ ಪರೀಕ್ಷೆಯನ್ನು ಸಹ ಮಾಡಲಾಗಿತ್ತು.
ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಟಿ.ಫಣೀಂಧರ, ರಾಘವೇಂದ್ರಾಚಾರ್, ಡಾ|| ಗಂಜಿ ನಾರಾಯಣ ರೆಡ್ಡಿ. ಡಾ॥ ಶ್ರೀ ಗುರು ಮುರುಗೇಶ್, ಡಾ|| ತಿಪ್ಪೇಸ್ವಾಮಿ.ಎನ್. ಡಾ॥ ದ್ರಾಕ್ಷಾಯಣಿ ಭಾಗವಹಿಸಿ ರೋಗಿಗಳಿಗೆ ತಪಾಸಣೆ ಮಾಡಿ ಔಷಧಿಗಳ ವಿತರಣೆ ಮಾಡಿದರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಮಹೇಶ್ ಬಾಬು ಡಿ. (ಯೋಗ ಶಿಕ್ಷಕರು), ಕೆ.ಹೇಮೇಶ್ವರ ಯೋಗಾ ತರಬೇತಿದಾರಾರು, ಶ್ರೀಮತಿ ರೇಖ ಸಂಯೋಜಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ. ಶ್ರೀಮತಿ ಸತ್ಯಮ್ಮ ಕಿ.ಆ.ಸ. ಆಶಾ ಕಾರ್ಯ ಕರ್ತರು, ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.