ರನ್ನ ಬೆಳಗಲಿ: ಜೂ.22., ಮುಧೋಳ ತಾಲೂಕಾ ರನ್ನ ಬೆಳಗಲಿಯ ಪಟ್ಟಣ ಪಂಚಾಯತ್ ಕಾರ್ಯಾಲಯ ಆವರಣದಲ್ಲಿ ಗುರುವಾರ ದಂದು ೧೦ನೇ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ಎನ್.ಎ.ಲಮಾಣಿ ಯೋಗ ದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆದರಿಂದ ಪ್ರತಿನಿತ್ಯ ಜೀವನದಲ್ಲಿ ಯೋಗಕ್ಕಾಗಿ ಸಮಯವನ್ನು ನೀಡಿ. ಯೋಗ ಶಿಕ್ಷಕರು ಹೇಳಿಕೊಡುವ ಸರಳ ಯೋಗ ಕ್ರಿಯೆಗಳನ್ನು
ಮೈಗೂಡಿಸಿಕೊಂಡರೆ ಉತ್ತಮ ಆರೋಗ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸ್ಥಳಿಯ ಯೋಗ ತರಬೇತಿದಾರರಾದ ರಾಘವೇಂದ್ರ ನೀಲಣ್ಣವರ ಅವರು ಭಾರತೀಯ ಋಷಿಗಳು ನೀಡಿದ ಲೋಕ ಕಲ್ಯಾಣ ವಿದ್ಯೆಯೇ ಯೋಗ ಮತ್ತು ಆಯುರ್ವೇದ ಜ್ಞಾನವಾಗಿದೆ. ಈ ವರ್ಷದ ಯೋಗ ದಿನಾಚರಣೆ ದೇಹವಾಕ್ಯ &quoಣ;ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ&quoಣ; ಅಂದರೆ ನಾನು ನನ್ನ
ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಉತ್ತಮ ಪ್ರಜೆಯಾಗಲು ಯೋಗ ಮಾಡಬೇಕು. ಪಟ್ಟಣದ ನೈರ್ಮಲ್ಯವನ್ನು ಕಾಪಾಡುವ ನೀವುಗಳು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಯೋಗವನ್ನ ಮೈಗೂಡಿಸಿಕೊಳ್ಳಿ. ನಿಮ್ಮೆಲ್ಲರ ಉತ್ತಮ ಆರೋಗ್ಯವೇ ಪಟ್ಟಣಕ್ಕೆ ರಕ್ಷಾ ಕವಚ ಎಂದು ತಿಳಿಸುವುದರ ಜೊತೆಗೆ ಎಲ್ಲಾ ವಯೋಮಾನದವರು ಮಾಡಬಹುದಾದ ಸರಳ ಯೋಗ ಕ್ರಿಯೆಗಳ ಜೊತೆಗೆ ಧ್ಯಾನ ಪ್ರಾಣಾಯಾಮ ಸಕ್ಕರೆ ಕಾಯಿಲೆ, ಮಾನಸಿಕ ಒತ್ತಡ, ಸ್ಥೂಲ ಕಾಯ, ಆಯಾಸ ಮತ್ತು ಸುಸ್ತು ನಿವಾರಣೆಗೆ ಸಂಬಂಧಿಸಿದ ಯೋಗಾಸನಗಳನ್ನು ಮಾಡಿಸುವುದರ ಜೊತೆಗೆ ಅವುಗಳ ಮಹತ್ವವನ್ನು ತಿಳಿಸಿದರು.
ಪಿ.ಡಿ.ನಾಗನೂರು ಪ್ರಥಮ ದರ್ಜೆ ಸಹಾಯಕರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಪೌರಕಾರ್ಮಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.