ಗದಗ,ಏಪ್ರಿಲ್ 16: ಕಾಲರಾ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಅಗತ್ಯ ಮುನ್ನೆಚ್ಚರ ವಹಿಸುವಂತೆ ಕಾಲರವು ವಿಬ್ರಿಯೋ ಕಾಲರಾ ಎಂಬ
ಬ್ಯಾಕ್ಟ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದ್ದು, ಈ ಬ್ಯಾಕ್ಟೀರಿಯಾ ಮನುಷ್ಯರ ದೇಹದಲ್ಲಿ ಕಲುಷಿತ ನೀರನ್ನು ಕುಡಿಯುವುದರಿಂದ ಮತ್ತು ಕಲುಷಿತ ಆಹಾರ ಸೇವಿಸುವುದರ ಮುಖಾಂತರ ಪ್ರಸರಣವಾಗುತ್ತದೆ. ಎಂದು ಎಂದು ಅಡವಿಸೋಮಾಪೂರ ಆರೋಗ್ಯ ಮಂದಿರದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಗ್ರಾಮದ ಮನೆ ಮನೆಗೆ ತೆರಳಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿಯ ಗದಗ ತಾಲೂಕಿನ ಅಡವಿಸೋಮಾಪೂರದಲ್ಲಿ ಗ್ರಾಮದಲ್ಲಿ ಸಾಂಕ್ರಾಮಿಕ ಆರೋಗಗಳ ಬಗ್ಗೆ ಅರಿವನ್ನು
ಮೂಡಿಸುವ ಕಾರ್ಯಕ್ರಮ ಮನೆಮನೆ ಬೇಟಿ ಮುಖಾಂತೆ ಜಾಗೃತಿಯನ್ನು ಮೂಡಿಸಿ ಯಾರಿಗಾದರು ಅತೀಸಾರ, ವಾಕರಿಕೆ, ವಾಂತಿ, ನಿರ್ಜಲೀಕರಣ ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಕುದಿಸಿ, ಆರಿಸಿದ ನೀರನ್ನು ಕುಡಿಯುವುದು. ಸಾರ್ವಜನಿಕರು ನೀರಿನ ಕೊಳಾಯಿ ಮತ್ತು ಸ್ಥಳವನ್ನು ಸ್ವಚ್ಛವಾಗಿ ಇಡುವುದು. ತಾಜಾ ಹಣ್ಣುಗಳು, ತರಕಾರಿಗಳನ್ನು ಮತ್ತು ಆಹಾರ ಪದಾರ್ಥಗಳನ್ನೇ ಉಪಯೋಗಿಸುವುದು. ಊಟ ತಯಾರಿಸುವ ಮತ್ತು ಊಟ
ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸುವುದು.
ಶೌಚಾಲಯವನ್ನು ಉಪಯೋಗಿಸುವ ಮುಂಚೆ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧಪಡಿಸಿದ ಆಹಾರ
ಪದಾರ್ಥಗಳ ಮೇಲೆ ಕ್ರಿಮಿ ಕೀಟಗಳು ಕುಳಿತುಕೊಳ್ಳುವಂತೆ ಸದಾ ಮುಚ್ಚಳದಿಂದ ಮುಚ್ಚಿಡುವಂತೆ ಮತ್ತು ಯಾವುದೇ ಜ್ವರವಿರಲಿ ರಕ್ತಪರೀಕ್ಷೆ ಮಡಿಸಿಕೊಳ್ಳಬೇಕು. ಮತ್ತು ನಿಮ್ಮ ಮನೆಯ ಸುದ್ದ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುವಂತಹ ಸೊಳ್ಳೆ ಮರಿ ಲಾರ್ವಾ ನಾಶಪಡಿಸವುದು ಮುಖ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಲಾ ಮೇವುಂಡಿ ರೇಣುಕಾ ಪುರದ ಉಮಾದೇವಿ ಖಾನಾಪೂರ ಸರಕಾರಿ ಮಂಜುಳಾ ಆರಿ ಲಲಿತಾ ಅಂಗಡಿ ಲಕ್ಷ್ಮಿ ಪೂಜಾರ ರೇಖಾ ಲಮಾಣಿ ಲಲಿತಾ ಸುರೇಶ ನಾಯಕ ದೀಪಾ ಮೇವುಂಡಿ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಮಾನ್ಯ ಸಂಪಾದಕರು/ ಜಿಲ್ಲಾ ವರದಿಗಾರರು ಗದಗ ಬೆಟಗೇರಿ ಇವರುಗಳಿಗೆ ಈ ಸುದ್ದಿಯನ್ನು ಪ್ರಕಟಿಸಲು ವಿನಂತಿ ಸಿದ್ದಪ್ಪ ಲಿಂಗದಾಳ