ಹುಕ್ಕೇರಿ: ಹಳ್ಳಿಯ ಜನರು ಆರೋಗ್ಯ ಬಗ್ಗೆ ನಿರ್ಲಕ್ಷಿಸದೆ ಮೊದಲು ಉತ್ತಮ ಆರೋಗ್ಯದ ಜೀವನ ಶೈಲಿಗೆ ಆಧ್ಯತೆ ನೀಡುವದು ಮುಖ್ಯವೆಂದು ಹೃದಯರೋಗ ತಜ್ಞ ಡಾ ರಮೇಶ ದೊಡಭಂಗಿ ಹೇಳಿದರು.
ಪಟ್ಟಣದ ಶ್ರೀ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಸಂಸ್ಥಾಪಕ ಜಿನೈಕ್ಯೆ ವಸಂತ ನಿಲಜಗಿ ಅವರ ೭ನೇ ಪುಣ್ಯಸ್ಮರಣೆ ಹಾಗೂ ಸಹಕಾರಿಯ ಬೆಳ್ಳಿ ಹಬ್ಬ ಮಹೋತ್ಸವ ಪ್ರಯುಕ್ತ ಮಹಾವೀರ ಸಮೂಹ ಸಂಸ್ಥೆ, ಎಂ ಎಂ ಜೋಶಿ,ಹಾಗೂ ಸಂಕೆಶ್ವರದ ವಿವೇಕಾನಂದ ಆಸ್ಪತ್ರೆಯ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಅಂದು ಇಂದಿನ ಆಹಾರ ಪಧ್ದತಿಯಲ್ಲಿ ಬದಲಾವಣೆಯಾಗಿರುವ ಹಿನ್ನಲೆಯಲ್ಲಿ ನಾವೂ ಸತ್ವಯುತ ಆಹಾರ ಪಡೆದು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ರಾಜ್ಯ ಸಂಚಾಲಕಿ ರೂಪಾ ಅಯ್ಯರ್ ಮಾತನಾಡಿ ಆರೋಗ್ಯ ಸದೃಢವಾಗಬೇಕಾದರೆ ಅದ್ಯಾತ್ಮ ಯೋಗ, ಹಾಗೂ ಪಂಚೇಂದ್ರಿಗಳು ನಿರಂತರ ಕ್ರಿಯಾಶೀಲವಾಗಿರಬೇಕು, ಪುಣ್ಯಸ್ಮರಣೆಯ ನೆಪದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮಹಾವೀರ ಸಮೂಹ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಸಾನ್ನಿಧ್ಯವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾಸ್ವಾಮಿಗಳು ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸೇವೆ ಮಾಡಲು ನಮ್ಮ ತಂದೆಯವರ ಮಾರ್ಗದರ್ಶನವೇ ಮುಖ್ಯವಾಗಿದ್ದು, ಅವರ ಸ್ಥಾಪಿಸಿದ ಸಹಕಾರಿ ಹಾಗೂ ಶಿಕ್ಷಣ ಸಂಸ್ಥೆ ನಮಗೆ ಶ್ರೀರಕ್ಷೆಯಾಗಿದೆ, ಎಂದರು
ಮಾತೋಶ್ರಿ ವಿಜಯಮಾಲಾ ನಿಲಜಗಿ, ಕಣ್ಣಿನ ಆಸ್ಪತ್ರೆಯ ಮಯೂರ ಕುಲಕರ್ಣಿ, ಬಿ.ಬಿ ಲಟ್ಟಿ, ಅಶೋಕ ಪಾಟೀಲ, ರೋಹಿತ ಚೌಗಲಾ, ಬಾಹುಬಲಿ ಸೋಲಾಪುರೆ, ಸಂಜಯ ನಿಲಜಗಿ ಪ್ರಜ್ವಲ್ ನಿಲಜಗಿ ರಾಜೇಂದ್ರ ಪಾಟೀಲ, ಸಂತೋಷ ರಜಪೂತ, ರವಿ ಚೌಗಲಾ, ಮತ್ತಿತರರು ಉಪಸ್ಥಿತರಿದ್ದರು. ಗುರು ಪೂರ್ಣಿಮೆ ನಿಮಿತ್ಯ ಶ್ರಿಗಳ ಪಾದ ಪೂಜೆಯನ್ನು ನಿಲಜಗಿ ಕುಂಟುಂಭದವರು ನೇರವೇರಿಸಿಕೊಟ್ಟರು.
ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಅರೋಗ್ಯ ಶಿಬಿರದಲ್ಲಿ ಪಾಲ್ಗೋಂಡು ಸದುಪಯೋಗ ಪಡಿಸಿಕೊಂಡರು.
ಪೋಟೋ ಶಿರ್ಷಿಕೆ ೭ ಹುಕ್ಕೇರಿ -೦೧.
ಹುಕ್ಕೇರಿಯಲ್ಲಿ ಮಹಾವೀರ ಸಮೂಹ ಸಂಸ್ತೆಯ ಸಂಸ್ಥಾಪಕ ವಸಂತ ನಿಲಜಗಿ ಅವರ ೭ನೇ ಪುಣ್ಯಸ್ಮರಣೆ ಹಾಗೂ ಸಹಕಾರಿಯ ಬೆಳ್ಳಿ ಹಬ್ಬ ಮಹೋತ್ಸವ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟಸಿದ ಗಣ್ಯರು.