ಚಿಕ್ಕೋಡಿ.ಕಳೆದ ಮೂವತೈದು ವರುಷಗಳಿಂದ ಸದಲಗಾ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯದ ಸಹಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಸಾರ್ಥಕ ಸೇವೆ ಸಲ್ಲಿಸಿದ ಕಲ್ಲೋಳ ಗ್ರಾಮದ ಸುಪ್ರಸಿದ್ಧ ಜಿನನೇಮಿಗಳಾದ ಜಂಬೂ ಗುಂಡೂ ಲಂಗೋಟೆ ಇವರನ್ನು ಅವರ ಕರ್ಮಭೂಮಿಯಾದ ಸದಲಗಾ ಪ್ರೌಢಶಾಲೆಯಲ್ಲಿ ವಿಶಿಷ್ಠವಾಗಿ ಬೀಳ್ಕೊಡಲಾಯಿತು.ಸತಿ ಪತಿಗಳನ್ನು ಒಂದೇ ವೇದಿಕೆಗೆ ತಂದು ಅವರ ಸಹೋದ್ಯೋಗಿ ಮಿತ್ರರು ಯಥೋಚಿತವಾದ ಕಾಣಿಕೆ ಇತ್ತು ಸತ್ಕರಿಸಿದರು.
ಯುವ ಕವಿಗಳಾದ ಕಾಳಪ್ಪಗೋಳ ಗುರುಗಳು ಹಾಗೂ ಜಯಪಾಲ ಸಮಾಜೆ ಅವರು ಮಾತನಾಡಿ ತೂಕದ ಪದಗಳಲ್ಲಿ ಅವರ ಗುಣಗಾನ ಮಾಡಿ , ಈ ಸದಲಗಾ ಪ್ರೌಢಶಾಲೆಯಲ್ಲಿ ಆದರ್ಶ ವ್ಯಕ್ತಿತ್ವದ ಶಿಕ್ಷಕಕರಾಗಿ, ಮುಕ್ಯೋಪಾಧ್ಯಾರಾಗಿ ಈ ಭಾಗದ ವಿದ್ಯಾರ್ಥಿಗಳ ಬೆಳವಣಿಗೆಗೆ ಅವರ ಶ್ರಮ ಇನ್ನೂ ಮುಂದೆ ಸಿಗುವದಿಲ್ಲ ಎಂದಾಗ ಎಲ್ಲರ ಕಣ್ಣು ಹನಿಗೂಡುವಂತೆ ಮಾಡಿದರು.
ಸನ್ಮಾನ ಸ್ವೀಕರಿಸಿ ಸೇವಾ ನಿವೃತ್ತ ಮುಕ್ಯೋಪಾಧ್ಯಾಯ ಲಂಗೋಟಿ ಗುರುಗಳು ಮಾತನಾಡಿ ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಸಹಯೋಗಿ ಶಿಕ್ಷಕರಿಗೆ, 35 ವರ್ಷಗಳ ಅವಧಿಯಲ್ಲಿ ವ್ಯಾಸಂಗ ಕಲಿತ ವಿದ್ಯಾರ್ಥಿಗಳಿಗೆ, ಶಾಲಾ ಸಿಬ್ಬಂದ್ದಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಲಂಗೋಟಿ ಗುರುಗಳ ಕುಟುಂಬಸ್ಥರು ಉಪಸ್ಥಿತರಿದ್ದರು.


