‘ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ’ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೇನೆ ಎಂದ ಹೆಚ್​ಡಿ ಕುಮಾರಸ್ವಾಮಿ

Ravi Talawar
‘ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ’ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೇನೆ ಎಂದ ಹೆಚ್​ಡಿ ಕುಮಾರಸ್ವಾಮಿ
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್​ 15: ರಾಜ್ಯದ ಹಣ ಲೂಟಿಯಾಗುತ್ತಿದೆ. ಕಾಂಗ್ರೆಸ್​ ಸರ್ಕಾರ  ಜನರ ತಲೆ ಮೇಲೆ ಸಾಲದ ಹೊರೆ ಹೊರಸುತ್ತಿದೆ. ಗ್ಯಾರಂಟಿಗಳಿಗೆ ಮಾರುಹೋಗಿ ದಾರಿ ತಪ್ಪಬೇಡಿ ಎಂದಿದ್ದೇನೆ. ದಾರಿ ತಪ್ಪುವುದು ಎಂಬ ಪದ ಅಶ್ಲೀಲನಾ? ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೇನೆ ಎಂದು ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ತಮ್ಮ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ  ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಮಕೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದಾಗ, ಹಲವಾರು ವಿಚಾರ ಪ್ರಸ್ತಾಪ ಮಾಡಿದೆ. ಈ ಸಂದರ್ಭದಲ್ಲಿ ನಾನು ನಾಡಿನ ಮಹಿಳೆಯರಿಗೆ ಅಪಮಾನ ಮಾಡಿದ್ದೇನೆ ಅಂತ ಕಾಂಗ್ರೆಸ್​ನವರು ಆರೋಪ ಮಾಡುತ್ತಿದ್ದಾರೆ.

ಫಿಕ್ ಪಾಕೇಟ್ ಮಾಡಿ, ಗ್ಯಾರಂಟಿ ಎರಡು ಸಾವಿರ ಕೊಟ್ಟಿದ್ದಾರೆ. ಅದಕ್ಕೆ ದಾರಿ ತಪ್ಪಬೇಡಿ ಅಂತ ಹೇಳಿದ್ದೇನೆ. ನನ್ನ ಅವಧಿಯಲ್ಲಿ ಸಾರಾಯಿ ನಿಷೇಧ ಮಾಡಿದೆ. ಮಹಿಳೆಯರಿಗೆ ಗೌರವ ಕೊಡಲು ನಾನು ಸಾರಾಯಿ ನಿಷೇಧ ಮಾಡಿದ್ದು ತಪ್ಪಾ. ಹೌದು, ನಾನು ದಾರಿತಪ್ಪಿದ್ದೆ, ಅದನ್ನು ಈ ಹಿಂದೆಯೇ ಸದನದಲ್ಲೇ ಹೇಳಿದ್ದೇನೆ. ನನ್ನ ಪತ್ನಿ ನನ್ನನ್ನು ತಿದ್ದಿದ್ದಾಳೆ ಎಂದರು.

ಕೆಲವು ಕುಟುಂಬದ ಹೆಣ್ಣು ಮಕ್ಕಳನ್ನು ಅಪಹರಿಸಿ, ಜಮೀನು ಬರೆಸಿಕೊಂಡಾಗ ಅವರಿಗೆ ಕಣ್ಣೀರು ಬರಲಿಲ್ಲ. ಡಿಕೆ ಶಿವಕುಮಾರ್​ ಅವರೇ, ನಿಮ್ಮ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಅವರು ಬಿಜೆಪಿ ಸಂಸದೆ ಹೇಮಾ ಮಾಲಿನಿ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಕನ್ನಡದಲ್ಲಿ ಹೇಳಲು‌ ಸಾಧ್ಯವಿಲ್ಲ. ಹೇಮಾ ಮಾಲಿನಿಗೆ ಬಿಜೆಪಿ ಟಿಕೆಟ್ ಕೊಟ್ಟಿರುವುದು ಲಿಫ್ ಮಾಡಲಿಕ್ಕೆ ಅಂತ ಸುರ್ಜೆವಾಲ ಹೇಳಿದ್ದಾರೆ. ಇದು ಅತ್ಯದ್ಭುತ ಹೇಳಿಕೆ ಅಲ್ಲವೇ ಡಿಕೆ ಶಿವಕುಮಾರ್ ಅವರೇ ಎಂದು ಪ್ರಶ್ನಿಸಿದರು.

ಕಂಗನ ರಾವತ್ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಮಹಿಳೆಯರಿಗೆ ರೆಟ್ ಫಿಕ್ಸ್ ಮಾಡಿದ್ರಿ ಅಂತ ಹೇಳಿದ್ರಿ. ಇದಕ್ಕೆ ನಿಮ್ಮ ಸೋನಿಯ ಗಾಂಧಿ ಏನು ಹೇಳುತ್ತಾರೆ. ವಿಧಾನಸಭೆ ಕಲಾಪದಲ್ಲಿ ರಮೇಶ್​ ಕುಮಾರ್ ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ ಎಂದು ಹೇಳಿದ್ದರು. ರಮೇಶ್​ ಕುಮಾರ್ ಹೇಳಿದ್ದನ್ನ ನೀವು ಮರೆತು ಬಿಟ್ರಾ? ಶಾಮನೂರು ಶಿವಶಂಕರಪ್ಪನವರು ಇತ್ತೀಚೆಗೆ ಹೆಣ್ಮಕ್ಕಳು ಅಡುಗೆ ಮನೆಯಿಂದ ಹೊರಬರಬಾರದು ಅಂದರು. ನಿಮ್ಮ ಪಕ್ಷದವರ ಹೇಳಿಕೆ ಕುರಿತು ನೂರಾರು ನಿದರ್ಶನಗಳನ್ನು ಕೊಡಬಲ್ಲೆ. ನಿಮ್ಮಿಂದ ನಾನು ಕಲಿಯಬೇಕಾ? ಮಹಿಳಾ ಆಯೋಗಕ್ಕೂ ಕಾಂಗ್ರೆಸ್​ನವರು ದೂರು ನೀಡಿದ್ದಾರಂತೆ. ನನಗೆ ನೋಟಿಸ್​ ಕೊಡಲಿ ನಾನು ಉತ್ತರ ಕೊಡುತ್ತೇನೆ ಎಂದರು.

WhatsApp Group Join Now
Telegram Group Join Now
Share This Article