ಭಾರತ-ಪಾಕಿಸ್ತಾನ ಈಗಾಗಲೇ 75 ವರ್ಷಗಳನ್ನು ವ್ಯರ್ಥ ಮಾಡಿವೆ, ಮುಂದಿನ 75 ವರ್ಷಗಳು ಹೀಗಾಗದಿರಲಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಂಬಂಧಗಳು ಕೊನೆಗೊಂಡಿವೆ. ಬಡತನದಿಂದ ಬಳಲುತ್ತಿರುವ ನೆರೆಯ ದೇಶವು ಪ್ರಧಾನಿ ನರೇಂದ್ರ ಮೋದಿಯವರಿಂದ ಉಭಯ ದೇಶಗಳ ನಡುವೆ ಮತ್ತೆ ಸೌಹಾರ್ದತೆ ಮೂಡಲಿ, ಸಂಬಂಧ ಸುಧಾರಿಸಲಿ ಎಂದು ಬಯಸಿದೆ.
ಇದು ಆರಂಭವಷ್ಟೇ. ಭಾರತ ಮತ್ತು ಪಾಕಿಸ್ತಾನ ಹಿಂದಿನದನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸುತ್ತವೆ ಎನ್ನುವ ನಂಬಿಕೆ ಇದೆ. ಪ್ರಧಾನಿ ಮೋದಿ ಇಲ್ಲಿಗೆ ಬರಬೇಕೆಂದು ಬಯಸಿದ್ದೆ, ವಿದೇಶಾಂಗ ಸಚಿವ ಜೈಶಂಕರ್ ಇಲ್ಲಿಗೆ ಬಂದಿದ್ದು ಹೊಸ ಆರಂಭಕ್ಕೆ ನಾಂದಿ ಹಾಡಿರುವುದು ಸಂತಸ ತಂದಿದೆ ಎಂದು ನವಾಜ್ ಷರೀಫ್ ಹೇಳಿದ್ದಾರೆ.