ಬಳ್ಳಾರಿ, ಆ.11: ಪರಿಶಿಷ್ಟಜಾತಿಯಲ್ಲಿ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಕಲ್ಪಿಸುವಲ್ಲಿ ಇದೆ ತಿಂಗಳ 16 ರ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೊಳೆದು ಒಳ ಮೀಸಲಾತಿ ಜಾರಿಗೊಳಿಸಬೇಕು ಇಲ್ಲವಾದಲ್ಲಿ ಸರ್ಕಾರ ವಿರುದ್ಧ ಮಾದಿಗ ಜನಾಂಗದಿಂದ ತೀವ್ರ ಹೋರಾಟವನ್ನು ನಡೆಸಲಾಗುವುದೆಂದು ಹೆಚ್.ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದುನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಮಾದಿಗರ ಜನಾಂಗಕ್ಕಾಗಿ ಒಳ ಮೀಸಲಾತಿ ಜಾರಿಗೆ ತರುವುದಾಗಿಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ,
ನಂತರ ಅದನ್ನು ಜಾರಿಗೆ ಆಸಕ್ತಿ ವಹಿಸುತ್ತಿಲ್ಲ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಸಲ್ಲಿಕೆಯಾದನಂತರ, ಯಾರದು ಮುಲಾಜಿಗೆ ಬಿದ್ದು ಮುಲಾಜಿಗೆ ಬಿದ್ದು ಮೀಸಲಾತಿ ಜಾರಿಗೊಳಿಸುವಲ್ಲಿ
ಮುಂದೂಡುತ್ತಾ ಬಂದಿದ್ದಾರೆ. ಮಾದಿಗ ಜನಾಂಗಕ್ಕೆ ಒಳಮಿಸಲಾತಿ ಜಾರಿಗೊಳಿಸುವಲ್ಲಿ ಪರಿಶಿಷ್ಟ ಜನಾಂಗದ ಮುಖಂಡರೇ ಅಡ್ಡಗಾಲು ಹಾಕುತ್ತಿರುವುದು ವಿಪರ್ಯಾಸ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿಯನ್ನು ಜಾರಿಗೊಳಿಸುವಂತೆ ಆದೇಶ ನೀಡಿ ಒಂದು ವರ್ಷ ಕಳೆದರೂ ಇಲ್ಲ ಸಲ್ಲದ ಸಂಭೋಗುಗಳನ್ನು ಹೇಳುತ್ತಾ ಸಿದ್ದರಾಮಯ್ಯನವರು ಆದೇಶ ಜಾರಿಗೊಳಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ ಕೂಡಲೇ ಕುರಿತು ಒಂದು ನಿರ್ಧಾರಕ್ಕೆ ಬರದೇ ಹೋದಲ್ಲಿ 18ರಂದು ಫ್ರೀಡಂ ಪಾರ್ಟ್ ನಲ್ಲಿ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಜೊತೆಗೆ ಮುಖ್ಯಮಂತ್ರಿಗಳ ನಿವಾಸವನ್ನು ಮುತ್ತಿಗೆ ಹಾಕಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಗೆಸ್ಟ್ ಹೌಸ್ ಈಶ್ವರಪ್ಪ, ಎಕೆ ಹುಲುಗಪ್ಪ, ಬೆಳಗುರ್ಕಿ ಸೋಮಶೇಖರ್, ವಸಂತ್ ಸೇರಿದಂತೆ ಇತರರಿದ್ದರು.