ಮುಗಳಖೋಡ23: ಪಟ್ಟಣದಲ್ಲಿ ಹನುಮಾನ ಓಕುಳಿ ನಿಮಿತ್ಯ ಶನಿವಾರ 24 ರಂದು ಬೆಳಿಗ್ಗೆ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಾಯಂಕಾಲ 4 ಗಂಟೆಗೆ ಕೊಂಡ ಪೂಜೆ, ರವಿವಾರ 25 ರಂದು ಸಾಯಂಕಾಲ 4 ಗಂಟೆಗೆ ನಡು ಓಕುಳಿ ಸೋಮವಾರ 26 ರಂದು ಬೆಳಿಗ್ಗೆ ಆಂಜನೇಯ ಸ್ವಾಮಿಗೆ ಅಭಿಷೇಕ ಎಲೆ ಪೂಜೆ ಸಾಯಂಕಾಲ 3 ಗಂಟೆಗೆ ವಿಠ್ಠಲ ಮಂದಿರದಿಂದ ಅನುಮಾನ ಮಂದಿರದ ವರೆಗೆ ಸಿದ್ದರಾಮೇಶ್ವರ ವಾಹನ ಚಾಲಕರ,ಮಾಲಿಕರ ಸಂಘ ಹಾಗೂ ಅಪ್ಪಾಜಿ ಹಮಾಲರ ಸಂಘ, ಹಾಗೂ ಸಕಲ ಸದ್ಭಕ್ತರಿಂದ ಸಕಲ ವಾದ್ಯ ವೃಂದದೊಂದಿಗೆ ವಾಯುಪುತ್ರನ ಭಾವಚಿತ್ರ ಭವ್ಯ ಮೆರವಣಿಗೆಯೊಂದಿಗೆ ಕೊಂಡಕ್ಕೆ ಜಲ ಸಮರ್ಪಣೆ,5 ಗಂಟೆಗೆ ಪಲ್ಲಕ್ಕಿ ಉತ್ಸವ ದೊಂದಿಗೆ ಕಡೆ ಓಕುಳಿ.ಮಂಗಳವಾರ 27 ರಂದು ಸಾಯಂಕಾಲ 4 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ಆಯೋಜಿಸಲಾಗಿದೆ.ಅಭಿಷೇಕ, ಎಲಿ ಪೂಜೆ ಸೇವೆ ಸಲ್ಲಿಸುವ ಭಕ್ತರು ದಿನಾಂಕ 24 ರ ಮುಂಚಿತ ಹೆಸರು ನೊಂದಾಯಿಸಿ, ಹಾಗೂ ಸಕಲ ಸದ್ಭಕ್ತರು ಭಾಗವಹಿಸಿ ಪಾವನರಾಗಿರಿ ಎಂದು ವ್ಯವಸ್ಥಾಪಕ ಸಮಿತಿ ತಿಳಿಸಿದೆ.