ಮಹಾಲಿಂಗಪುರ:ಸ್ಥಳೀಯ ಜಿಎಲ್ಬಿಸಿ ಆವರಣದಲ್ಲಿರುವ ಶ್ರೀ ಹನುಮಂತೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಹನುಮ ಜಯಂತಿ ಗುರುವಾರ ಆಚರಿಸಲಾಯಿತು.ತನ್ನಿಮಿತ್ತ ಹನುಮ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿದರೆ ದೇವಸ್ಥಾವನ್ನು ಹೂಗಳು ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತುಇಡೀ ಆವರಣದಲ್ಲಿ ಹಬ್ಬದ ಕಳೆ ಎದ್ದು ಕಾಣುತ್ತಿತ್ತು. ಮುಂಜಾನೆ ರುದ್ರಾಭೀಷೇಕ,ನಾಮಕರಣ,ಪವಮಾನ ಹೋಮ ನಂತರ ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಅರುಣ ಗುರೂಜಿ, ವಿಶಾಲ ಗುರೂಜಿ, ಮಹಾಲಿಂಗ ಗುರವ, ಕೆಂಚಪ್ಪ ಧಾರ್ಮಿಕ ಕಾರ್ಯ ನೆರವೇರಿಸಿದರು.
ಜೋಗುಳ ಹಾಡಿ ನಾಮಕರಣ ಮಾಡಿದ್ದು, ಹೋಮ ಹವನ ಗಮನ ಸೆಳೆದವು.
೧೯೭೬ ರಲ್ಲಿ ನಿರ್ಮಾಣವಾದ ಈ ದೇವಾಲಯದ ನಿರ್ಮಾಣ ಕಾರ್ಯದ ಸಂಸ್ಥಾಪಕ ಅಧ್ಯಕ್ಷ ನಿವೃತ್ತ ಎಇಇ ಎಂ.ಆರ್.ಪಾಟೀಲ, ಸಿ.ಡಿ.ಜಾಗನೂರ,
ಜಿಎಲ್ಬಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಎಂ.ಕೆ.ಯಡೆಪ್ಪನವರ ಸಿಬ್ಬಂದಿಯವರಾದ ಬಿ.ಕೆ.ಪರೀಟ,ಎಂ.ಎಂ.ಡೋಣಿ,ಪಿ.ಆರ್.ಬಿರಾಜನವರ,ಎಸ್.ಎಂ.ಹುದ್ದಾರ,
ಎಂ.ವೈ.ತೋಟದ,ಕೆ.ಎಸ್.ಹಿರೇಮಠ,ಎಂ.ವಿ.ಹಿಟ್ಟಿನಮಠ,ಜಿ.ಎಸ್.ಮಠಪತಿ,ಎಂ.ಎಸ್.ಮುಗಳಖೋಡ,ಚನಬಸು ಯರಗಟ್ಟಿ, ಎಂ.ಟಿ.ರೂಗಿ, ಎಸ್.ಎಚ್.ಹಿರೇಮಠ, ಅಶೋಕ ಬಾಣಕಾರ,ಚಿದಾನಂದ ಚಿಂದಿ ಮುಂತಾದವರು ಈ ಸತ್ಕಾರ್ಯದಲ್ಲಿ ಭಾಗಿಯಾಗಿದ್ದರು.


