ರಾಯಬಾಗ: ತಾಲೂಕಿನ ಬಾವಚಿ ಗ್ರಾಮದ ಹನುಮಾನ ಮತ್ತು ಬೀರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಶನಿವಾರ ದೇವರ ನೈವೇದ್ಯ ಮತ್ತು ಮಹಾ ಪ್ರಸಾದ ನೆರವೇರಿತು. ಜಾತ್ರಾ ಮಹೋತ್ಸವ ಅಂಗವಾಗಿ ಬೆಳ್ಳಿಗ್ಗೆ ನಡೆದ ವಿವಿಧ ಶರ್ಯತ್ತುಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ಜಾತ್ರಾ ಕಮಿಟಿಯವರು ವಿತರಿಸಿದರು.
ಶರ್ಯತ್ತುಗಳ ವಿವರ: ಜೋಡು ಎತ್ತಿನ ಗಾಡಿ ಶರ್ಯತ್ತು: ಅಕ್ಷಯ ಪೊಟು (ಸಲಗರ) ಪ್ರಥಮ, ರವಿ ಆಲಖನೂರ ದ್ವಿತೀಯ, ಫಾರೂಕ ಜಮಾದಾರ (ಡಿಗ್ರಜ) ತೃತೀಯ ಹಾಗೂ ಬಂಡು ಖಿಲಾರೆ (ದಾನೋಳಿ) ಚತುರ್ಥ ಬಹುಮಾನ ಪಡೆದರು. ಎರಡು ಹಲ್ಲಿನ ಹೋರಿ ಮತ್ತು ಎತ್ತು ಶರ್ಯತ್ತು: ಭರತಗೌಡ ಪಾಟೀಲ ಪ್ರಥಮ, ಅಮೂಲ ಸಾಧನರ್ತೆ ದ್ವಿತೀಯ, ತೇಜಸ್ ಮಗದುಮ್ಮ ತೃತೀಯ ಬಹುಮಾನ ಪಡೆದರು. ಕುದುರೆ ಮತ್ತು ಎತ್ತಿನ ಗಾಡಿ ಶರ್ಯತ್ತು: ಶಿವಾನಂದ ಬಾವಚಿ ಪ್ರಥಮ, ಸಂಗಪ್ಪ ಹರಕೆ ದ್ವಿತೀಯ ಮತ್ತು ತಾನಾಜಿ ಸುಡಕೆ ತೃತೀಯ ಬಹುಮಾನ ಪಡೆದರು. ಕುದುರೆ ಮತ್ತು ಹಲ್ಲು ಹಚ್ಚದ ಕರ ಶರ್ಯತ್ತು: ವಿಠ್ಠಲ ಬಾವಚೆ ಪ್ರಥಮ, ಸಂದೀಪ ಮಾನಾಕಾಪೂರೆ ದ್ವಿತೀಯ ಹಾಗ ರಾಜು ಉಮಣಿ ತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಎಮ್.ಎಮ್.ಪಾಟೀಲ, ಕೆ.ಎಸ್.ಪುಂಡಿಪಲ್ಲೆ, ಕೆ.ಎಸ್
ನಾಯಿಕ, ಮಾರುತಿ ನಾಯಿಕ, ನಿಂಗಪ್ಪ ನಾಯಿಕ, ಮಹಾಂತೇಶ ಐಹೊಳೆ, ದಯಾನಂದ ನಾಯಿಕ, ಬಿ.ಎಮ್.ನಾಯಿಕ, ಮಹಾದೇವ ನಾಯಿಕ, ಸುರೇಶ ನಾಯಿಕ, ಶಂಕರ ನಾಯಿಕ, ನಾರಾಯಣ ಪೂಜೇರಿ ಸೇರಿ ಜಾತ್ರಾ ಕಮಿಟಿ ಸದಸ್ಯರು ಇದ್ದರು.


