ಧರ್ಮಸ್ಥಳ ಸಂಘದಿಂದ ವಾತ್ಸಲ್ಯ ಮನೆ ಹಸ್ತಾಂತರ

Ravi Talawar
ಧರ್ಮಸ್ಥಳ ಸಂಘದಿಂದ ವಾತ್ಸಲ್ಯ ಮನೆ ಹಸ್ತಾಂತರ
WhatsApp Group Join Now
Telegram Group Join Now
ಬೈಲಹೊಂಗಲ. ತಾಲೂಕಿನ  ಜಾಲಿಕೊಪ್ಪ ಗ್ರಾಮದಲ್ಲಿ  ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಮಾಡಲಾಗಿದ್ದು, ಇಂದು ಶ್ರೀಮತಿ ಸಾವಕ್ಕ ಮಾದರ ಇವರಿಗೆ ವಾತ್ಸಲ್ಯ ಮನೆ  ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಯಲ್ಲಪ್ಪ ಹುಲಗಣ್ಣವರ,  ಬೆಳಗಾವಿ  ಜಿಲ್ಲೆಯ ನಿರ್ದೇಶಕರಾದ  ಸತೀಶ್ ನಾಯ್ಕ್ ಸೂರ್ಯನ, ಗಣ್ಯರಾದ ಬಸನಗೌಡ ಪಾಟೀಲ, ಮಲ್ಲಪ್ಪ ಮುರಗೌಡ, ಅಡಿವಯ್ಯ ಹಿರೇಮಠ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಶ್ರೀಮತಿ ದಾನಮ್ಮ ಛಬ್ಬಿ ,ಜನಜಾಗೃತಿ ವೇದಿಕೆ ಸದಸ್ಯರಾದ ವಿಟಲ್ ಪೀಸ್, ರತ್ನ ಗೋಧಿ  ಪ್ರಾದೇಶಿಕ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಮೇಡಂ, ತಾಲೂಕು ಯೋಜನಾಧಿಕಾರಿ ವಿಜಯ್ ಕುಮಾರ,ತಾಲೂಕು ಜ್ಞಾನ ವಿಕಾಸ ಸಮನ್ವ್ಯಾಧಿಕಾರಿ ಶೈಲಾ ಜಕ್ಕಣ್ಣವರ ವಲಯದ ಮೇಲ್ವಿಚಾರಕರಾದ ಮಹಾಂತೇಶ   ಇವರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ಮಾಡಿ ನಾಮ ಫಲಕ ಅನಾಾವರಣಗೊಳ್ಳುವ ಮೂಲಕ ಮನೆ ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯಕ ಮಾತನಾಡಿ  ಕ್ಷೇತ್ರದಿಂದ ನಡೆಯುವ ಕಾರ್ಯಕ್ರಮಗಳು ನಿರ್ಗತಿಕರಿಗೆ ಮಾಸಾಸನ ವಾತ್ಸಲ್ಯ ಮಿಕ್ಸ್ ಮತ್ತು ಕಿಟ್ ಜಲಮಂಗಳ ಜ್ಞಾನ ದೀಪ ಶಿಕ್ಷಕರ ವದಗನೆ ಸುಜ್ಞಾನ ನಿಧಿ ಶಿಷ್ಯವೇತನ ಇನ್ನು ಹತ್ತು ಹಲವಾರು ಕಾರ್ಯಕ್ರಮಗಳು ಕ್ಷೇತ್ರದಿಂದ ಪರಮ ಪೂಜ್ಯರ ಆಶೀರ್ವಾದದಲ್ಲಿ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಊರಿನ ಗಣ್ಯರಾದ ಮಲ್ಲಪ್ಪ ಮುರ ಗೌಡ ಅವರು      ಢಾ. ವೀರೇಂದ್ರ ಹೆಗ್ಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ಅಮ್ಮನವ ಮಾಡುವ ಕೆಲಸ ಕಾರ್ಯಗಳು ಯಾವ ಸರ್ಕಾರವು ಮಾಡುವುದಿಲ್ಲ ಯಾರು ಇಲ್ಲದ ನಿರ್ಗತಿಕರ ಆಯ್ಕೆಯನ್ನು ಮಾಡಿ ಅವರಿಗೆ ಮನೆ ಮಾಡಿ ಕೊಡುವ ಮೂಲಕ ಅವರ ಬದುಕು ಕಟ್ಟಿಕೊಡುವಲ್ಲಿ ಮತ್ತು ಅವರಿಗೆ ಬದುಕುವ ಧೈರ್ಯ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಿರುವುದು ಪರಮಪೂಜ್ಯ ದಂಪತಿಗಳು ಎಂದು ಶುಭ ಹಾರೈಕೆ ನೀಡಿದರು.
ಈ ಸಂದರ್ಭ ಸೇವಾ ಪ್ರತಿನಿಧಿ ಸಾವಕ್ಕ  ವಿ ಎಲ್ ಇ  ಮಧು  ಗ್ರಾಮ ಪಂಚಾಯತ ಸದಸ್ಯರು, ಒಕ್ಕೂಟದ ಅಧ್ಯಕ್ಷರು/ಪದಾಧಿಕಾರಿಗಳು ಮತ್ತು ಜ್ಞಾನವಿಕಾಸ ಕೇಂದ್ರದ ಸರ್ವ ಸದಸ್ಯರು  ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article