ಹಡಪದ ಅಪ್ಪಣ್ಣವರ ಶರಣರ ಆದರ್ಶ ಬದುಕು ಎಲ್ಲರಿಗೂ ಮಾದರಿ : ಶೇಖರ ಅಂಗಡಿ

Ravi Talawar
ಹಡಪದ ಅಪ್ಪಣ್ಣವರ ಶರಣರ ಆದರ್ಶ ಬದುಕು ಎಲ್ಲರಿಗೂ ಮಾದರಿ : ಶೇಖರ ಅಂಗಡಿ
filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); modeInfo: ; sceneMode: 4194304; cct_value: 4596; AI_Scene: (-1, -1); aec_lux: 204.3318; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 33;
WhatsApp Group Join Now
Telegram Group Join Now

ರನ್ನ ಬೆಳಗಲಿ: ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆಯಲ್ಲಿ ೮೯೦ ನೇ ಅಪ್ಪಣ್ಣನ ಜಯಂತಿ ಕಾರ್ಯಕ್ರಮ ಜರಗಿತು. ಪುರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶೇಖರ ಅಂಗಡಿ ಹನ್ನೆರಡನೆಯಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು ಇವರು
ಹಡಪದ ಸಮಾಜದವರಾಗಿದ್ದು. ಬಸವಣ್ಣನವರ ಬಲಗೈ ಬಂಟರೆಂದೇ ಖ್ಯಾತಿ ಪಡೆದಿದ್ದರು. ಇವರುವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ &quoಣ;ಅನುಭವ ಮಂಟಪದಲ್ಲಿ &quoಣ;ಬಸವಣ್ಣವರ ಪ್ರಧಾನ ಕಾರ್ಯದರ್ಶಿಗಳಾಗಿ ನಿಸ್ಕಳಂಕ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರ
ಕಾರ್ಯಕ್ಷಮತೆ ಇಂದಿನವರಿಗೆ ಮಾದರಿಯಾಗಿದೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಪ್ಪಣ್ಣವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿಮಾತನಾಡಿ ಹಿಂದಿನ ಕಾಲದಲ್ಲಿ ಜನ ಮೌಢ್ಯತೆಯನ್ನು ನಂಬುತ್ತಿದ್ದರು. ಅಂದು ಹಡಪದ ಸಮಾಜದವರು ಎದುರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯುಳ್ಳವರಾಗಿದ್ದರು.ಇದನ್ನು ಹೋಗಲಾಡಿಸುವುದಕ್ಕಾಗಿಯೇ ಬಸವಣ್ಣವರು ಯಾರೇ ಬಂದರು ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಲೆಂದೇ ಅವರನ್ನು ಪ್ರಧಾನ
ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡು ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ಮೂಢನಂಬಿಕೆ ಹೋಗಲಾಡಿಸಿದ್ದರು ಎಂದರು.

ನಂತರ ಮಾತನಾಡಿದ ಪುರಸಭೆ ಅಧಿಕಾರಿಗಳಾದ ಎಸ್.ಎನ್. ಪಾಟೀಲ ಅವರು ಅಪ್ಪಣ್ಣವರು ಹುಟ್ಟಿದ್ದು ಅಂದಿನ ಬಿಜಾಪುರ ಜಿಲ್ಲೆಯ ತಂಗಡಗಿಯಲ್ಲಿ ಅವರ ಧರ್ಮ ಪತ್ನಿ ಲಿಂಗಮ್ಮನವರು ಸಹ ಮಹಾನ ವಚನಗರ್ತಿಯಾಗಿದ್ದರು. ಅಪ್ಪಣ್ಣನವರು ಸುಮಾರು ೨೫೦ ಕ್ಕೂ ಹೆಚ್ಚು ವಚನಗಳನ್ನು ಚನ್ನಬಸವಣ್ಣ ಎಂಬ ಅಂಕಿತನಾಮ ದಿಂದ ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರು.ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆ ಶ್ರಮಿಸಿದ ಮಹಾನ್ ಶರಣರಾಗಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ದಾರಕ್ಕೆ ದಾರಿದಿಪಗಳಾಗಿವೆ.ಇವರ ವಚನಗಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ, ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ ಎಂದರು.

ನಂತರ ಮಾತನಾಡಿದ ಸಮಾಜದ ಮುಖಂಡರಾದ ಪ್ರಭು ನಾವಿ ಮನುಷ್ಯ ಅಂರಂಗದ ಅರಿಷಡ್ವರ್ಗಗಳನ್ನು ನಿಗ್ರಹಿಸದ ಹೊರತು ನಿಜ ಮನುಜನಾಗಲು ಸಾಧ್ಯವಿಲ್ಲ. ನಾನು ನಾನು ಎಂದು ಅಹಂಕಾರ ದಿಂದ ತನ್ನನ್ನು ತಾನು ಅರಿಯದೆ ತಣ್ಣವರು ತನ್ನ ಸಮಾಜ ನಾವು ನಮ್ಮವರು ಎಂದಾಗಲೇ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ಸಮಾಜಕ್ಕಾಗಿ ದುಡಿಯಬೇಕು ಸಮಾಜಕ್ಕಾಗಿ ಮಡಿಯಬೇಕು ಆಗಲೇ ಹುಟ್ಟಿದ್ದು ಸ್ವಾರ್ಥಕವಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಸಮಾಜದ ಮುಖಂಡರು, ಪತ್ರಕರ್ತರಾದ ಹಣಮಂತ ನಾವಿ, ಚನ್ನಬಸು ಹಡಪದ, ಸಿದ್ದು ಹಡಪದ, ಶ್ರೀಶೈಲ ಹಡಪದ,ಪುರಸಭೆ ಸಿಬ್ಬಂದಿಗಳಾದ ಎಂ ಎಂ ಮುಗಳಖೋಡ, ಎಸ್.ಜಿ ಅಳ್ಳಿಮಟ್ಟಿ, ಆರ್.ಎಸ್ ಹೂಗಾರ, ಎಂ.ಕೆ ದಳವಾಯಿ, ಎಸ್ ಜಿ ಕಟ್ಟಿ, ಡಿ ಕೆ ಜಮಖಂಡಿ, ಶ್ರೀಕಾಂತ್ ಹಡಪದ, ಲಕ್ಷ್ಮಿ ಪರಿಟ್, ರಾಮು, ರವಿ ಹಲಸಪ್ಪಗೋಳ ಸೇರಿ ಹಲವರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article