ಬೈಲಹೊಂಗಲ: ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಆಪ್ತ ಸಾಹಾಯಕರಾದ ಹಡಪದ ಅಪ್ಪಣ್ಣನವರು ವಚನ ಸಾಹಿತ್ಯ ಇಂದಿಗೂ ಅಂತ್ಯತ ಪ್ರಸ್ತುತವಾಗಿವೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಪಂಚಾಯತಿ ಕಾರ್ಯಾಲಯದಲ್ಲಿ ಹಡಪದ ಅಪ್ಪಣ್ಣನವರ 890ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರ ಕಾರ್ಯಕ್ಷಮತೆಗೆ ಇಂದಿನ ಜನಾಂಗಕ್ಕೆ ಕನ್ನಡಿಯಾಗಿದೆ.
12 ಶತಮಾನದಲ್ಲಿ ಲಿಂಗಾಯತರೆಲ್ಲರೂ ಶೂದ್ರರೆ ಆಗಿದ್ದರು. ಕಾಲಕ್ಕೆ ತಕ್ಕಂತೆ ತಮ್ಮ ಆಹಾರ ಜೀವನ ಶೈಲಿ ಹಾಗೂ ಉದ್ಯೋಗದ ಆದಾರದ ಮೇಲೆ ಬೇರೆ ಬೇರೆಯಾಗಿದ್ದಾರೆ. ಆರ್ಥಿಕ ಸ್ಥಿತಿಗತಿಯ ಮೇಲೆ ಶೈಕ್ಷಣಿಕ ಹಾಗೂ ಉದ್ಯೋಗ ಮಿಸಲಾತಿಯನ್ನು ಅವಶ್ಯಕವಾಗಿ ಸರ್ಕಾರ ನೀಡಬೇಕು. ಹಡಪದ ಅಪ್ಪಣ್ಣ ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರು ಒಂದು ಉತ್ತಮ ಉದಾಹರಣೆಯಾಗಿರುತ್ತಾರೆ. ಇವರ ಜೀವನದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಯಾಗಬೇಕಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಶ್ರೀದೇವಿ ತಳವಾರ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರ ಡಿ.ಎಸ್.ಕನಕ್ಕನ್ನವರ ಮಾತನಾಡಿ, ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂಬ ನಿಯಮವನ್ನು ಮಾಡಿದ್ದರೆಂಬ ಪ್ರತೀತಿ ಇದೆ. ಇವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರ ವಿಜಯಪುರ ಜಿಲ್ಲೆಯ ತಂಗಡಗಿಯಲ್ಲಿ ಜನಿಸಿ ಅಲ್ಲಿಯೆ ಇವರ ಸಮಾಧಿಯೂ ಸಹ ಇದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಬಸವರಾಜ ಪೇಂಟೆದ, ಮಲ್ಲಿಕಾರ್ಜುನ ಕರಡಿಗುದ್ದಿ, ಮಡಿವಾಳಪ್ಪ ಕಮತಗಿ, ಸಂಜು ಪಾಟೀಲ, ಮಲ್ಲವ್ವ ಬಾರಿಗಿಡದ, ಗಂಗವ್ವ ಅರವಳ್ಳಿ, ರುಕ್ಸಾನ್ ಶೇಖ, ದೀಪಾ ಪಾಟೀಲ, ಮಲ್ಲವ್ವ ಸುತಗಟ್ಟಿ, ಈರಪ್ಪ ಹಡಪದ, ಮಡಿವಾಳಪ್ಪ ಹಡಪದ, ಶಂಕರ್ ನಾವಲಗಿ, ಮಹದೇವಪ್ಪ ಹಡಪದ, ಮಡಿವಾಳಪ್ಪ ಮದಲಬಾವಿ, ಮಲ್ಲಿಕಾರ್ಜುನ ನವಲಗಿ, ಬಸವರಾಜ ನವಲಗಿ, ಶಂಕರ್ ಹಡಪದ, ಈಶ್ವರ ಹಡಪದ ಹಾಗೂ ಗ್ರಾಮಸ್ಥರು ಇದ್ದರು.