ಅಂಕಲಗಿ ಮಠದಲ್ಲಿ ಗುರುವಂದನೆ ಬೆಳದಿಂಗಳ ಬೆಳಕು ಕಾರ್ಯಕ್ರಮ

Ravi Talawar
ಅಂಕಲಗಿ ಮಠದಲ್ಲಿ ಗುರುವಂದನೆ ಬೆಳದಿಂಗಳ ಬೆಳಕು ಕಾರ್ಯಕ್ರಮ
WhatsApp Group Join Now
Telegram Group Join Now
ಅಂಕಲಗಿ,20:  ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನ ಮಠ ಅಂಕಲಗಿ ,ಶ್ರೀ ಅಡವಿಸಿದ್ದೇಶ್ವರ ಶರಣರ ಬಳಗ ಮತ್ತು ಕಪರಟ್ಟಿ ಶ್ರೀ ಗುರು ಮಹಾದೇವಾಶ್ರಮ ಗೋಕಾಕ ಹಾಗೂ ದಿ.ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಚಾರಿಟೇಬಲ್ ಟ್ರಸ್ಟ್ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ  ಅಂಕಲಗಿ ಶ್ರೀ ಅಡವಿಸಿದ್ಧೇಶ್ವರ ಮಠದಲ್ಲಿ ಇದೇ ರವಿವಾರ ದಿ.೨೧-೦೭-೨೦೨೪ ರಂದು ಸಂಜೆ ೬-೩೦ ಕ್ಕೆ. ಬೆಳದಿಂಗಳ ಬೆಳಕು 9 ಹಾಗೂ ಶ್ರೀ ಬಸವ ಮಹಾಪೂಜೆ  ಕಾರ್ಯಕ್ರಮ ಜರುಗಲಿದೆ.
ನಂತರ ಗುರುಪೂರ್ಣಿಮೆಯ ನಿಮಿತ್ಯ ಶ್ರೀ ಮಠದ ಪೀಠಾಧಿಪತಿಗಳಾದ ಅಮರಸಿದ್ಧೇಶ್ವರ ಶ್ರೀಗಳ  ಪಾದಪೂಜೆ ಹಾಗೂ ಗುರುವಂದನ ಸಮಾರಂಭ ಜರುಗಲಿದ್ದು,  ಸಾನಿಧ್ಯವನ್ನು  ಮಠಾಧ್ಯಕ್ಷರಾದ   ಅಮರಸಿದ್ದೇಶ್ವರ ಶ್ರೀಗಳು   ವಹಿಸುವರು.
ಬಸವ ಮಹಾಪೂಜೆ ಕುರಿತ ಪ್ರವಚನವನ್ನು  ಕಳ್ಳಿಗುದ್ದಿ :ಶ್ರೀ ಬಸವರಾಜ ಸ್ವಾಮಿಗಳು ಕಪರಟ್ಟಿ  ನಡೆಸುವರು. ಮುಖ್ಯ ಅತಿಥಿಗಳಾಗಿ   ಅಂಬಿರಾವ್ ಪಾಟೀಲ ಆಗಮಿಸಲಿದ್ದು  ಸರ್ವ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀ ಅಡವಿಸಿದ್ಧೇಶ್ವರ ಕ್ರಪೆಗೆ ಪಾತ್ರರಾಗುವಂತೆ ಮಠದ ಪ್ರಕಟಣೆ  ಕೋರಿದೆ.
WhatsApp Group Join Now
Telegram Group Join Now
Share This Article