ಬಡವರ ಆರೋಗ್ಯ ಸೇವೆಯಿಂದ ಪುಣ್ಯ ಪ್ರಾಪ್ತಿ: ಗುರುಸಿದ್ದೇಶ್ವರ ಶ್ರೀಗಳು

Ravi Talawar
ಬಡವರ ಆರೋಗ್ಯ ಸೇವೆಯಿಂದ ಪುಣ್ಯ ಪ್ರಾಪ್ತಿ: ಗುರುಸಿದ್ದೇಶ್ವರ ಶ್ರೀಗಳು
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
WhatsApp Group Join Now
Telegram Group Join Now

ಮಹಾಲಿಂಗಪುರ: ಉಳ್ಳವರು ಬಡವರಿಗೆ ಆರೋಗ್ಯದ ವಿವಿಧ ರೀತಿಯ ಉಚಿತ ಸೇವೆಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ರಬಕವಿಯ ಬೃಹ್ಮಾನಂದಮಠದ ಗುರುಸಿದ್ದೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಸಿದ್ಧಾರೂಢ ಆಶ್ರಮದಲ್ಲಿ ಶುಕ್ರವಾರ ಸಿ. ಎಂ. ಹುರಕಡ್ಲಿ ಫೌಂಡೇಶನ್ ವತಿಯಿಂದ ಕೃತಕ ಕೈ, ಕಾಲು ಜೋಡಣೆ ಮತ್ತು ಆಸರೆ ಕೋಲುಗಳ ವಿತರಣಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನು?ನ ಜೀವನದಲ್ಲಿ ಅಂಗವೈಕಲ್ಯವಾಗುವಂತಹ ಅನೇಕ ದುರಂತ ಘಟನೆಗಳು ನಡೆಯುತ್ತವೆ. ಶ್ರೀಮಂತರು ಕೃತಕ ಪರಿಕರಗಳನ್ನು ಖರಿದಿಸಲು ಎತೇಚ್ಛ ಹಣ ಖರ್ಚು ಮಾಡಿದರೆ,ದುರ್ಭಲ ಆರ್ಥಿಕ ಸ್ಥಿತಿ ಉಳ್ಳವರಿಗೆ ಇದು ಅಸಾಧ್ಯ.ಇಂತಹ ಸಂದರ್ಭದಲ್ಲಿ ದುರ್ಬಲ ವರ್ಗದವರ ಅಂಗವೈಕಲ್ಯ ನೋವು ನಲಿವು ಕಂಡು ಅವರಿಗೆ ಸರಿ ಹೊಂದುವ ಕೃತಕ ಕೈ, ಕಾಲು ಮತ್ತು ಇನ್ನಿತರ ಉಪಕರಣಗಳನ್ನು ಉಚಿತವಾಗಿ ನೀಡುವುದಿದೆಯಲ್ಲ, ಆ ಸೇವೆ ಜನಾರ್ದನ ಸೇವೆ ಇದ್ದಂತೆ, ಎಂದು ಪೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ ಮತ್ತು ದಂಪತಿ ಕಾರ್ಯ ವೈಖರಿ ಮೆಚ್ಚುವಂಥದ್ದು ಇದು ನಿರಂತರ ಸಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧಾರೂಢ ಆಶ್ರಮದ ಸಹಜಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ, ಶ್ರೀಮಂತಿಕೆ ಅಸ್ಥಿರ, ದಾನ, ಧರ್ಮ ಮತ್ತು ಕೀರ್ತಿ ಇವು ಸ್ಥಿರ.ಇವುಗಳನ್ನು ಗಮನದಲ್ಲಿಟ್ಟುಕೊಂಡು ಕ?ದಲ್ಲಿರುವವರಿಗೆ ಸಹಾಯ ಸಹಕಾರ ನೀಡುವುದು ಮಾನವ ಧರ್ಮ.ಈ ನಿಟ್ಟಿನಲ್ಲಿ ಹುರಕಡ್ಲಿ ದಂಪತಿಗಳು ನಿರಂತರ ೧೬ ವ?ಗಳಿಂದ ತಂದೆ ತಾಯಿಗಳ ಸ್ಮರಣೆಯಲ್ಲಿ ಅಂಗಾಂಗ ವಿಕಲರಿಗೆ ಉಚಿತ ಸಲಕರಣೆಗಳನ್ನು ವಿತರಿಸುತ್ತಿರುವುದು ಬಡವರ ಪಾಲಿಗೆ ವರದಾನವಾಗಿದ್ದಾರೆ ಎಂದು ಹೇಳಿದರು.

೭೦ ಜನರಿಗೆ (ತಲಾ ೮ ಸಾವಿರ) ಕೃತಕ ಕೈ, ಕಾಲು ಜೋಡಣೆ, ೧೪ (ತಲಾ ೫ ಸಾವಿರ) ಜನರಿಗೆ ಕ್ಯಾಲಿಬರ್ ಮತ್ತು ೩೪ ಜನರಿಗೆ (ತಲಾ ೨ ಸಾವಿರ) ಆಸರೆ ಕೋಲುಗಳನ್ನು ಉಚಿತವಾಗಿ ವಿತರಿಸಲಾಯಿತು ಎಂದು ಪೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ ಹೇಳಿದರು.

ಇನ್ನೂಳಿದಂತೆ ಸಮಾರಂಭದಲ್ಲಿ ಪೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಲಿ, ಪುರಸಭೆ ಸದಸ್ಯೆ ಸವಿತಾ ಚ. ಹುರಕಡ್ಲಿ, ಮಹಾವೀರ ಲಿಂಬ್ ಸೆಂಟರ್ ಹುಬ್ಬಳ್ಳಿಯ ಡಾ.ಮಹಾದೇವ ನಾಯ್ಕ, ಕಾನಿಪ ಅಧ್ಯಕ್ಷ ಮಹೇಶ್ ಮಣ್ಣಯ್ಯನವರಮಠ ಮತ್ತು ಎಸ್.ಕೆ. ಪಕಾಲಿ ಸೇರಿದಂತೆ ಪೌಂಡೇಶನ್ ಕಾರ್ಯಕರ್ತರು ಇದ್ದರು. ಕಲಾವಿದ ಶಿವಾನಂದ ಬಿದರಿ ಸ್ವಾಗತಿಸಿ,ಪತ್ರಕರ್ತ ಚಂದ್ರಶೇಖರ ಮೋರೆ ನಿರೂಪಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article