ಜಮಖಂಡಿ: (ಡಿ.13), ಸಮಾಜ ಸೇವೆ ಮಾಡುವಂತಹ ಗುಣ ಎಲ್ಲರಲ್ಲಿ ಇರಬೇಕು ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಸೇವೆಯನ್ನು ಮಾಡುವುದು. ದೊಡ್ಡಗುಣ. ಜನರನ್ನು ಕೇಳಿ ಸಹಾಯ ಮಾಡುವುದಕ್ಕಿಂತ ಕೇಳದೇ ಮಾಡಿದ ಸಹಾಯ ಉತ್ತಮ ಎನಿಸಿಕೊಳ್ಳುತ್ತದೆ ಎಂದು ಅಡಬಿ ಅಡವಿ ಸಿದ್ದೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಮರೆಗುದ್ದಿಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಸಾಮಾಜಕಾರ್ಯ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ 7 ದಿನಗಳ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜನ ಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗಳ ಕುರಿತು ತಿಳಿದು ಕೊಂಡು ಕೈಲಾದ ಸಹಾಯ ಮಾಡಬೇಕು ಅದಕ್ಕೆ ಅಧಿಕಾರ ಅಥವಾ ಇನ್ನಾವುದೇ ಸೌಲತ್ತು ಇಲ್ಲ ಎಂದು ಹೇಳುವ ಮನಸ್ಥಿಯಿಂದಾಚೆಗೆ ಬಂದು ತಮಗಿರುವ ಶಕ್ತಯ ಅನುಸಾರ ಸೇವೆ ಮಾಡಬೇಕು ಎಂದು ತಿಳಿಸಿದರು. ಗ್ರಾಮೀಣ ಭಾಗದ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳ ಕುರಿತು ತಿಳದು ಕೊಂಡು ಸೂಕ್ತಮಾರ್ಗದರ್ಶನವನ್ನು ನೀಡಬೇಕು ಎಂದು ತಿಳಿಸಿದರು. ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ತಿಕ ಭುಮಕ್ಕನವರ ಪ್ರಾರ್ಥನಾ ಗೀತೆ ಹಾಡಿದರು.
ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಆರತಿ ಗುಡ್ಡೆನ್ನವರ,ಸ್ವಾಗತ ಕೊರಿದರು. ಸಂಜನಾ ಕಲಕಂಬ ಪುಷ್ಪಾರ್ಪಣೆ ಮಾಡಿದರು. ಕರ್ಯಕ್ರಮದಲ್ಲಿ ಗಣಪತಿ ಉಪ್ಪಾರ, ಪಂಪಾಪತಿ, ಯೋಗಾನಂದ ಕರಿಗಾರ ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹನುಮಂತ ಗುಡಿ ಹಾಗೂ ವಿಶ್ವ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳುಷಿ ಇದ್ದರು ಪ್ರಿಯಾಂಕಾ ಬಬಲಾದಿ ವಂದಿಸಿದರು..


