ಅಂಕಲಗಿ,31 : ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಹೆಜ್ಜೆ ಹಾಕುತ್ತಿರುವದಕ್ಕೆ ನಮ್ಮ ಕ್ರೂರ ನಡೆಯೇ ಕಾರಣ ಎಂದು ಗೋಕಾಕ ನ ಲೈನ್ಸ್ ಇಂಟರ್ ನ್ಯಾಶನಲ್ ಸಂಸ್ಥೆಯ ಜಂಟಿ ಕಾರ್ಯದರ್ಶಿ , ಗುರುದೇವ ಸಿದ್ದಾಪುರಮಠ ಹೇಳಿದರು. ಅವರು ಗುರುವಾರ ಅಡವಿಸ್ವಾಮಿ ಶರಣರು, ಬೆಳಗಾವಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಮತ್ತು ಲೈನ್ಸ್ ಕ್ಲಬ್ ಗೋಕಾಕ ಇವರ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ತ ಅಡವಿಸಿದ್ದೇಶ್ವರ ಶರಣ ಸದ್ಭಕ್ತರಿಂದ ಅಕ್ಕತಂಗೇರಹಾಳ ಗ್ರಾಮದ ಶ್ರೀ ದುರ್ಗಾ ದೇವಸ್ಥಾನದಿಂದ ಶ್ರೀ ಕ್ಷೇತ್ರ ಉಳವಿ ಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಕುಂಡದ ಸಸಿಗೆ ನೀರುಣಿಸುವದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಕಳೆದ ೫ ವರ್ಷಗಳಿಂದ ಈ ಶರಣ ರ ಪಾದಯಾತ್ರೆ ಸಂಪ್ರದಾಯಕ್ಕೆ ನಾವು ಸಾಕ್ಷಿಯಾಗುತ್ತಿದ್ದು ,ನಮ್ಮಪೂರ್ವ ಜನ್ಮದ ಪುಣ್ಯ . ಪವಿತ್ರ ಶ್ರಾವಣ ಮಾಸದಲ್ಲಿ ಸಹ್ಯಾದ್ರಿಯ ಕ್ಷೇತ್ರ ಉಳವಿ ಗೆ ಪಾದ ಬೆಳೆಸಿದ್ದು , ಪರಿಸರ ಮತ್ತು ವನ್ಯಜೀವಿ ಸಂಕುಲಕ್ಕೆ ಹೊಸ ಭಾಷ್ಯ ಬರೆಯಲಿ. ಇಂದಿನ ನಮ್ಮೀ ಕೂಗಿನಿಂದ ಪರಿಸರ ಮತ್ತು ವನ್ಯಜೀವಿ ಸಂಪತ್ತು ಮತ್ತಷ್ಟು ಸಂಪನ್ನವಾದರೆ ಇದುವೇ ನಮ್ಮ ಮುಂದಿನ ಪೀಳಿಗೆಗೆ ಕೊಡುವ ಅತ್ಯಂತ ದೊಡ್ಡ ಆಸ್ತಿ ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಗೋಕಾಕ ಲೈನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಶೈಲ ಹಂಜಿ ಮಾತನಾಡಿ, ಪಾದಯಾತ್ರಾರ್ಥಿಗಳು ಶರಣ ತತ್ವ ಮತ್ತು ಸಿದ್ಧಾಂತ ಗಳನ್ನು ಅನುಸರಿಸುವದರ ಮೂಲಕ ಶಿವ ಶರಣರ ನಾಡದ ಈ ಕುಂದರನಾಡು ಸಕಲ ಸಂಪತ್ತಿನ ಬೀಡಾಗಲಿ ಎಂದರಲ್ಲದೆ, ಬದುಕಿನಲ್ಲಿ ಶಿಸ್ತು ಮತ್ತು ಸಂಯಮದಿಂದ ವರ್ತಿಸಿ, ಇತರರಿಗೆ ಸ್ಫೂರ್ತಿಯಾಗಬೇಕು ಅಂದಾಗ ಈ ಶ್ರಾವಣ ಮಾಸದ ಆಚರಣೆ ಸಾರ್ಥಕವಾಗುವದು ಎಂದರು.
ಶ್ರೀ ದುರ್ಗಾ ದೇವಸ್ಥಾನ ದ ಅಧ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ, ಪಾದಯಾತ್ರಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಬೆಳಗಾವಿ ಶ್ರೀ ಬಸವೇಶ್ವರ ಇಲೆಕ್ಟ್ರಿಕಲ್ಸ್ ಗುತ್ತಿಗೆದಾರ ಬಸವರಾಜ ಮಠಪತಿ ಸರ್ವ ಪಾದಯಾತ್ರಾರ್ಥಿಗಳಿಗೆ ಟೀ ಶರ್ಟ್ ವಿತರಿಸಿದರು. ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಅದ್ಯಕ್ಷ ಸುರೇಶ ಉರಬಿನಟ್ಟಿ ಸರ್ವರನ್ನು ಸ್ವಾಗತಿಸಿ ಮಾತನಾಡಿ, ಸಹ್ಯಾದ್ರಿಯು ನಮ್ಮ ಅಮೂಲ್ಯ ಸಂಪತ್ತು. ಅದರ ಸಂರಕ್ಷಣೆಗೆ ನಾವು ಯಾವತ್ತೂ ಬದ್ದರಾಗಿರಬೇಕು ಎಂದರಲ್ಲದೆ, ಧನ್ಯವಾದ ಹೇಳಿದರು.
ಈ ಸಂದರ್ಭದಲ್ಲಿ ಧುರೀಣರಾದ ವ್ಹಿ.ಬಿ.ಈಶ್ವರಪ್ಪಗೋಳ, ಜೆಜಿಕೋ ನಿರ್ದೇಶಕ ಅರ್ಜುನ ಕರಲಿಂಗನ್ನವರ, ಅಡಿವೆಪ್ಪಾ ಬ ಪಾಟೀಲ, ಸಂತೋಷ ಈಶ್ವರಪ್ಪಗೋಳ, ಅಶೋಕ ಕರಲಿಂಗನ್ನವರ, ಶಂಕರ ಬೆಣ್ಣಿ, ಶಿವಾನಂದ ಪಂಗನ್ನವರ, ಮಹಾಂತೇಶ ಈಶ್ವರಪ್ಪಗೋಳ, ಗೌಡಪ್ಪಾ ಹೊಳೆಯಾಚಿ, ಶ್ರೀಧರ ಈಶ್ವರಪ್ಪಗೋಳ, ಗುರು ಶರಣ ,ಮಹೇಶ ನಿರ್ವಾಣಿ, ರಾಜು ತಿಳಗಂಜಿ, ಅಜೇಯ ಕಬಾಡಗಿ, ವಿನೋದ ನೇಸರಗಿ, ದುಂಡಪ್ಪಾ ವನ್ನೂರ, ಬಸವರಾಜ ಗುರಾಯಿ, ಅಜ್ಜಪ್ಪಾ ಬೆಣ್ಣಿ, ಕಾರ್ತಿಕ ಸತ್ತಿಗೇರಿ, ಸಿದ್ದು ಸತ್ತಿಗೇರಿ ಸೇರಿದಂತೆ ನೂರಾರು ಶರಣರು ಉಪಸ್ತಿತರಿದ್ದರಲ್ಲದೆ, ಕ್ಷೇತ್ರ ಉಳವಿಗೆ ಹೆಜ್ಜೆ ಹಾಕಿದರು.