ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ

Ravi Talawar
ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
WhatsApp Group Join Now
Telegram Group Join Now

ಮಹಾಲಿಂಗಪುರ: ಗುರುವಿನ ಸ್ಥಾನ ನೀಡಿ ಗೌರವ ಹೆಚ್ಚಿಸಿದ ಶಿಷ್ಯರ ಗುರುಭಕ್ತಿಗೆ ಶರಣಾಗುವೆವು ಎಂದು ಸ್ಥಳೀಯ ಎಸ್‌ಸಿಪಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಹೇಳಿದರು.
ಇಲ್ಲಿನ ಎಸ್‌ಸಿಪಿ ಪ್ರೌಢಶಾಲೆಯಲ್ಲಿ ೨೦೦೬-೦೭ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಳಿದೆಲ್ಲ ಶಿಕ್ಷಕರು ಮಾತನಾಡಿ, ಕಲಿತ ಶಾಲೆ ಮತ್ತು ಕಲಿಸಿದ ಗುರುಗಳನ್ನು ೧೮ ವರ್ಷಗಳ ನಂತರ ನೆನೆದು ಎಲ್ಲರನ್ನೂ ಸನ್ಮಾನಿಸುವ ಗುರುಭಕ್ತಿ ಶ್ಲಾಘನೀಯ ಎಂದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳು ನೆಲಕ್ಕೆ ಹೂವು ಹಾಸಿ ಇಕ್ಕೆಲಗಳಲ್ಲಿ ನಿಂತು ಎಲ್ಲ ಗುರುಗಳ ತಲೆ ಮೇಲೆ ಹೂಮಳೆಗರೆದು ವೇದಿಕೆಗೆ ಬರಮಾಡಿಕೊಂಡರು. ಹೂಗುಚ್ಚ ನೀಡಿ ಗೌರವಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ತಮ್ಮನ್ನು ಅಗಲಿದ ಶಿಕ್ಷಕರಾದ ಎಸ್.ಜಿ.ಜೀವಣಿ, ಸಿ.ಎಸ್.ಕೊಣ್ಣೂರ ಹಾಗೂ ಸಹಪಾಠಿಗಳಾದ ಶಿವಲೀಲಾ ಶಿರೋಳ, ಮಹಾಲಿಂಗ ಮಠಪತಿ ಅವರಿಗೆ ಮೌನ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಸವಿತಾ ಕಂಬಾರ, ಮಾಲಾಶ್ರೀ ಉಪ್ಪಾರ ಪ್ರಾರ್ಥನೆ ಹಾಡಿದರು. ಪೂಜಾ ಶಿರೋಳ, ಅಶ್ವಿನಿ ಹುಡೇದಮನಿ ಸ್ವ್ವಾಗತ ಗೀತೆ ಹಾಡಿದರು. ಅಕ್ಷತಾ ಮುಧೋಳ ಪುಷ್ಪಾರ್ಪಣೆ ಮಾಡಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಪೂಜಾ ಶಿರೋಳ, ಚೇತನ ಡೋಣಿ, ಪ್ರವೀಣ ಹೊಸಕೋಟಿ ಅನಿಸಿಕೆ ವ್ಯಕ್ತಪಡಿಸಿದರು.
ಗುರುಗಳಾದ ಎಸ್.ಬಿ.ಹುಲಕುಂದ, ಎಸ್.ಬಿ.ಕೋರಿಶೆಟ್ಟಿ, ಎಂ.ಐ.ಡಾಂಗೆ, ಬಿ.ಡಿ.ಗೋಕಾಕ, ಬಿ.ಎನ್.ಅರಕೇರಿ, ಆರ್.ಎಸ್.ಯರಗಾಣಿ, ಎಸ್.ಎಸ್.ಅನಿಗೋಳ, ಸಿ.ಎ.ಫಡತಾರೆ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.

ಗುರು-ಶಿಷ್ಯರು ಪರಸ್ಪರ ಗತಕಾಲದ ನೆನಪು ಮತ್ತು ಅನುಭವಗಳನ್ನು ಮೆಲಕು ಹಾಕಿದರು. ವಿದ್ಯಾರ್ಥಿಗಳು ಪ್ರತಿಯೊಬ್ಬ ಶಿಕ್ಷಕರಿಗೂ ಒಂದೊಂದು ಗಿಡ ನೀಡಿ ಅದು ಹಚ್ಚಹಸಿರಾಗಿರುವಂತೆ ಮತ್ತು ತಮ್ಮ ನೆನಪು ಕೂಡ ಹಸಿರಾಗಿರುವಂತೆ ಮನವಿ ಮಾಡಿದರು. ಎಲ್ಲ ಗುರುಶಿಷ್ಯರೊಂದಾಗಿ ಗ್ರುಫ್ ಫೋಟೋ ಮತ್ತು ಸೆಲ್ಫೀ ಫೋಟೋ ತೆಗೆಸಿಕೊಂಡರು. ನಂತರ ಎಲ್ಲರೂ ಜವಾರಿ ರೊಟ್ಟಿ, ಚಪಾತಿ, ಪನೀರ್ ಪಲ್ಯ, ಉಸಳಿ, ಮೊಸರು, ಚಟ್ನಿ, ಪ್ರ್ಯೂಟ್ ಸಲಾಡ್, ತರಕಾರಿ ಸಲಾಡ್, ಮಧುರಮಿಲನ್ ಸಿಹಿ ಖಾದ್ಯ, ಮಸಾಲೇ ಅನ್ನ, ಸಾರು, ಮಜ್ಜಿಗೆ ಊಟ ಸವಿದರು. ಮೊದಲು ಗುರುಗಳಿಗೆ ಉಣಬಡಿಸಿ ನಂತರ ತಾವು ಊಟ ಮಾಡಿದರು.
ಪ್ರವೀಣ ಸೋನಾರ, ವನಜಾ ಶಿವಣಗಿ, ಗೋಪಿನಾಥ ರೇಣಕೆ, ಅಕ್ಷತಾ ಮುಧೋಳ, ಶಿವು ಅಂಬಿ, ಪೂಜಾ ಶಿರೋಳ, ಮಾಲಾಶ್ರೀ ಉಪ್ಪಾರ, ಪ್ರವೀಣ ಹೊಸಕೋಟಿ ಸೇರಿದಂತೆ ಹಲವಾರು ಸಹಪಾಠಿಗಳು ಕಾರ್ಯಕ್ರಮ ಸಂಘಟಿಸಿದ್ದರು.

 

 

WhatsApp Group Join Now
Telegram Group Join Now
Share This Article