ಅಥಣಿ. ಫೆ. 17.ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ರವಿವಾರದಂದು ಜರುಗಿದ ಆರೂಢಜ್ಯೋತಿ ಪಟ್ಟಣ ಸಹಕಾರ ಬ್ಯಾಂಕಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗಾಗಿ ಅಧ್ಯಕ್ಷರಾಗಿ ಗುರುಬಸು ಮುರಿಗೆಪ್ಪ ತೆವರಮನಿ ಹಾಗೂ ಉಪಾಧ್ಯಕ್ಷರಾಗಿ ಸಂಜಯ ಶಿವಲಿಂಗಪ್ಪ ನಾಯಕ ಇವರು ಅವಿರೋಧವಾಗಿ ಆಯ್ಕೆಯಾದರು .
ಈ ಸಂದರ್ಭದಲ್ಲಿ ಬ್ಯಾಂಕಿನ ನೂತನ ಅಧ್ಯಕ್ಷರು ಮಾತನಾಡಿ ಒಂದು ಸಹಕಾರಿ ಸಂಸ್ಥೆ ನಮ್ಮ ಮನೆ ಇದ್ದಂತೆ ಇಲ್ಲಿ ಎಲ್ಲಾ ಸದಸ್ಯರು ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಒಂದೇ ಕುಟುಂಬದವರು ಇದ್ದಂತೆ ಈ ಮನೆಯಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಪರಸ್ಪರ ಸಹಕಾರ ಮನೋಭಾವದಿಂದ ಮನೆಯ ಅಭಿವೃದ್ಧಿಗಾಗಿ ದುಡಿದಾಗ ಮಾತ್ರ ನಮಗೆ ಉಜ್ವಲ ಭವಿಷ್ಯವಿದೆ ಹಾಗೆಯೆ ಬ್ಯಾಂಕಿನ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸ್ವಾರ್ಥವನ್ನು ಬಿಟ್ಟು ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸಲು ಸದಾ ಬದ್ಧರಾಗಿರಬೇಕು. ಸಮಾನ ಮನಸ್ಕರ ಸಂಗಮದಿಂದ ಮಾತ್ರ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಗಳು, ತಾಲೂಕ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಆರ್ ಎನ್ ನೂಲಿ ಹಾಗೂ ಸಿಬ್ಬಂದಿ ಶ್ರೀಮತಿ ಆಶಾ ಭಿರಾದಾರ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ದು ಶಿರಗೂರ. ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ನಾಯಿಕ, ರಾಮಗೌಡ ಗುಮ್ತಾಜ ಶಿದರಾಯ, ನಾಯಿಕ ಪ್ರಭಾಕರ ಹಂಜಿ, ಸತೀಶ ಶೇಡಶ್ಯಾಳ, ಅಭಿಜಿತ್ ಮೆಣಶಿ, ಯಂಕಪ್ಪ ಖೋತ, ತಮ್ಮಣ್ಣ ರಬಕವಿ, ಸಿಬ್ಬಂದಿಗಳಾದ ಬಸವರಾಜ ಇಟ್ನಾಳ,ಭೀಮಾಶಂಕರ ಶಿರಗೂರ,ಮುರುಗೇಶ ಶೆಟ್ಟಿ. ಶಿದ್ದಲಿಂಗ ಗುಡ್ಡೋಡಗಿ, ಈರಣ್ಣ ಅಡಗಲ್ಲ, ಮಲ್ಲು ಖೋತ, ಆಡಳಿತ ಮಂಡಳಿ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.