ದೇವಲಾಪುರ. ಗ್ರಾಮದೇವತೆ ಶ್ರೀ ಉಡಚಮ್ಮ ದೇವಿಯ 18ನೇ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ 1992ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಜಾತ್ರೆಗೆ ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಈ ವಿದ್ಯಾರ್ಥಿಗಳಿಂದ ಅನ್ನಪ್ರಸಾದ ಸೇವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಗುರುವಂದನಾ ಕಾರ್ಯಕ್ರಮದಲ್ಲಿ 1992 ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಶಿಕ್ಷಕರಾದ ವ್ಹಿ ಆರ್. ಹಿರೇಮಠ, ಎಮ್ ಬಿ. ಭಜಂತ್ರಿ, ಎಮ್ ಎ. ನಾಯ್ಕ್, ಎಮ್ ವಾಯ್. ರಾವುಳ್ಳ, ಪ್ರಾಥಮಿಕ ಶಾಲಾ ಗುರುಗಳಾದ ಬಿ ಎಮ್. ದಿಬ್ಬದ, ಬಿ ಎಸ್. ಪಾಟೀಲ ಶಿಕ್ಷಕರುಗಳಿಗೆ ಸನ್ಮಾನ ಮಾಡಿ ಗುರುವಂದನೆ ಸಲ್ಲಿಸಲಾಯಿತು. ಪರಮ ಪೂಜ್ಯ ಮಾತಾಜಿ ಶಿವದೇವಿ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಜಾತ್ರಾ ಕಮಿಟಿಯ ಅಧ್ಯಕ್ಷರಾದ ಈಶ್ವರ ಉಳ್ಳೇಗಡ್ಡಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕರಾದ ಎಮ್ ವಾಯ್ ರಾವುಳ್ಳ, ಎಂ ಬಿ ಭಜಂತ್ರಿ, ವ್ಹಿ ಆರ್ ಹಿರೇಮಠ ರವರು ದೇವಲಾಪುರ ಗ್ರಾಮ ಸುಸಂಸ್ಕೃತ ಪ್ರಜ್ಞಾವಂತ ವಿದ್ಯಾರ್ಥಿಗಳ ಗ್ರಾಮ, ಇಲ್ಲಿನ ಆಧ್ಯಾತ್ಮಿಕ ಮನೋಭಾವದ ಸದ್ಭಕ್ತರಿಂದಾಗಿ ಆಧ್ಯಾತ್ಮಿಕ ಸುಕ್ಷೇತ್ರವಾಗಿದೆ ಎಂದು ಅಭಿಮಾನದ ನುಡಿಗಳನ್ನಾಡಿ, ತಮ್ಮ ವಿದ್ಯಾರ್ಥಿಗಳು ಈ ಗುರುವಂದನೆ ಸಲ್ಲಿಸಿರುವುದು, ನಮ್ಮ ಸೇವೆಗೆ ಮುಕುಟಪ್ರಾಯವಾಗಿದೆ ಎಂದರು.