ವಿಶ್ವಕರ್ಮ ವಿಶ್ವಕ್ಕೆ ಗುರು – ಶ್ರೀಶೈಲ ಗುಡುಮೆ

Chandrashekar Pattar
ವಿಶ್ವಕರ್ಮ ವಿಶ್ವಕ್ಕೆ ಗುರು – ಶ್ರೀಶೈಲ ಗುಡುಮೆ
Oplus_16908288
WhatsApp Group Join Now
Telegram Group Join Now

ಮೂಡಲಗಿ: ವಿಶ್ವಕರ್ಮನು ಜಗತ್ತಿನ ಸೃಷ್ಟಿಕರ್ತನಾಗಿದ್ದು, ಲೋಕದ ಸ್ಥಿತಿ- ಲಯಾಧಿಗಳಿಗೆ ಕಾರಕನಾಗಿ ವಿಶ್ವಕ್ಕೆ ಗುರುವಾಗಿದ್ದಾನೆ ಎಂದು ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು.

ಪಟ್ಟಣದಲ್ಲಿ ಬುಧವಾರ ಮೂಡಲಗಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಮೂಡಲಗಿ ವಿಶ್ವಕರ್ಮ ಸಮಾಜದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಡಾ. ರಾಜು ಕಂಬಾರ ಮಾತನಾಡಿ, ಜಗತ್ತಿಗೆ ವಿಶ್ವಕರ್ಮರ ಕೊಡುಗೆ ಅನನ್ಯವಾಗಿದ್ದು, ಅವರ ಕಲೆ ಸಾಹಿತ್ಯ ಸಂಸ್ಕೃತಿ ಉತ್ಕೃಷ್ಟ ವಾಗಿವೆ. ಇವರಲ್ಲಿಯ ಆದಿಶಕ್ತಿ, ಪರಾಶಕ್ತಿ,ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳು ವಿಶ್ವಕರ್ಮರನ್ನು ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸಿವೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ, ಉಪತಹಶೀಲ್ದಾರ ಶಿವಾನಂದ ಬಬಲಿ, ವಿಶ್ವಕರ್ಮ ಸಮಾಜದ ಸಮಾಜದ ಹಿರಿಯರಾದ ಈರಪ್ಪ ಪತ್ತಾರ್ , ವಿರುಪಾಕ್ಷಿ ಪತ್ತಾರ್, ಈಶ್ವರ್ ಬಡಿಗೇರ, ಮೌನೇಶ್ ಪತ್ತಾರ್, ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಶ್ರೀಕಾಂತ ಪತ್ತಾರ್, ಸೇರಿದಂತೆ ಹಲವಾರು ಸಮಾಜ ಬಾಂಧವರು ಉಪಸ್ಥಿತರಿದ್ದರು. ವಿಶ್ರಾಂತ ಶಿಕ್ಷಕ ಗಜಾನನ ಪತ್ತಾರ್ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article