ಗುರ್ಲಾಪೂರ(04):- ಸ್ಥಳೀಯ ಗುರ್ಲಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಗುರ್ಲಾಪೂರ ಇದರ 2026 27 ನೇ ಸಾಲಿನ ಅಧ್ಯಕ್ಷರಾಗಿ ಮಹದೇವ್ ಬಿ ರಂಗಾಪುರ ಉಪಾಧ್ಯಕ್ಷರಾಗಿ ಶ್ರೀಮತಿ ಬಾಗವ್ವಾ ಸಿ ನೇಮಗೌಡರ ಇವರು ಆಯ್ಕೆಯಾಗಿದ್ದರ ಪ್ರಯುಕ್ತವಾಗಿ ಇವರನ್ನು ಗ್ರಾಮದ ಶ್ರೀ ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ. ಗುರ್ಲಾಪೂರ ವತಿಯಿಂದ ಇವರನ್ನು ಸತ್ಕರಿಸಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡಿದ ರೇವಣಸಿದ್ದೇಶ್ವರ ಬ್ಯಾಂಕಿನ ಉಪಾಧ್ಯಕ್ಷರು ಆಗಿರುವ ಮಹದೇವ ರಂಗಾಪೂರ ಅವರು ಗ್ರಾಮದಲ್ಲಿ ಬಹುತೇಕ ರೈತಾಪಿ ಜನರು ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ ಅವರ ಏಳಿಗೆಗಾಗಿ ಯೋಗ್ಯ ದರದಲ್ಲಿ ಪಶು ಆಹಾರ ಹಿಂಡಿ ಪ್ಯಾಟ ಆಧಾರಿತವಾಗಿ ಹಾಲಿನ ದರದಲ್ಲಿ ಬದಲಾವಣೆ ತರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇವಣಸಿದ್ದೇಶ್ವರ ಬ್ಯಾಂಕಿನ ಅಧ್ಯಕ್ಷರಾದ ರಾಮಪ್ಪ ನೇಮಗೌಡರ, ಸದಸ್ಯರಾದ ಲಗಮಪ್ಪ ಹಳ್ಳೂರ, ಎ ಡಿ ಗಾಣಿಗೇರ, ಆರ್ ಸಿ ಸತ್ತಿಗೇರಿ ವಿಠ್ಠಲ ಜಾದವ, ಶ್ರೀಶೈಲ ನೇಮಗೌಡರ, ಮಲ್ಲೇಶ ನೇಮಗೌಡರ, ಪ್ರಧಾನ ಕಾರ್ಯದರ್ಶಿ ಆನಂದ ಶಿವಾಪೂರ, ಸಿಬ್ಬಂದಿ ಬಸಯ್ಯ ಹಿರೇಮಠ, ಪ್ರಭು ಸುಳ್ಳನ್ನವರ, ಆದಿನಾಥ ತರಗಾರ, ದರೇಪ್ಪ ಮಿರ್ಜಿ, ದರೇಪ್ಪ ಗಾಣಿಗೇರ ಅನೇಕರು ಉಪಸ್ಥಿತರಿದ್ದರು.


