ನೇಸರಗಿ.ನಿರಂತರ 29 ವರ್ಷ ಸೇವೆ ಗೈದು ನಿವೃತ್ತಿ ಹೊಂದಿದ ದೇಶನೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ , ಬಂಗ್ಲೆ ಶಾಲೆಯ ಮುಖ್ಯ ಶಿಕ್ಷಕರಾದ ಗುರಪ್ಪ ಧಾರಪ್ಪನವರ ಇವರ ಶಿಕ್ಷಕ ವೃತ್ತಿ ವಿದ್ಯಾರ್ಥಿಗಳ ಬೆಳವಣಿಗೆಗೆ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವದು ಹೆಮ್ಮೆಯ ಸಂಗತಿ ಎಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ ಎನ್ ಪ್ಯಾಟಿ ಹೇಳಿದರು.
ಅವರು ನಿರಂತರ 29 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಯುಕ್ತ ಗುರಪ್ಪ ಧಾರಪ್ಪನವರ ಅವರನ್ನು ಸತ್ಕರಿಸಿ ಸನ್ಮಾನಿಸಿ ಮಾತನಾಡಿ ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಕಸಾಳೆ, ಹಾಗೂ ಸಿ ಆರ್ ಪಿ ಗಳಾದ ರಾಜು ಹಕ್ಕಿ, ಈಶ್ವರ ಗಡದವರ ಶಿಕ್ಷಕರು ಜೊತೆಗಿದ್ದರು.