ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ ಅಧಿಕಾರ ಸ್ವೀಕಾರ
ಧಾರವಾಡ
2018 ಬ್ಯಾಚ್ ಐಪಿಎಸ್ ಅಧಿಕಾರಿ ಗುಂಜನ ಆರ್ಯ ಅವರು ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂದು ಸಂಜೆ ಹಿಂದಿನ ಎಸ್.ಪಿ.ಡಾ. ಗೋಪಾಲ ಬ್ಯಾಕೋಡ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಗುಂಜನ್ ಆರ್ಯ ಅವರು ಮೂಲತಃ ಮಧ್ಯಪ್ರದೇಶ ರಾಜ್ಯದವರಾಗಿದ್ದು, 2018 ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಅವರು ರಾಯಚೂರ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಚಿಕ್ಕಮಂಗಳೂರು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡ ಎಸ್.ಪಿ. ಆಗಿ ನೇಮಕವಾಗುವ ಮೊದಲು ಅವರು ಬೆಂಗಳೂರಿನಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದರು.
ಬೆಂಗಳೂರಿಗೆ ವರ್ಗಾವಣೆ ಆಗಿರುವ ಡಾ.ಗೋಪಾಲ ಬ್ಯಾಕೋಡ್ ಅವರಿಗೆ ಇಂದು ಸಂಜೆ ಎಸ್.ಪಿ.ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಬಿಳ್ಕೋಡುಗೆ ನೀಡಿ, ನೂತನ ಎಸ್.ಪಿ.ಗುಂಜನ್ ಆರ್ಯ ಅವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ, ಉಪ ಪೊಲೀಸ ವರಿಷ್ಠಾಧಿಕಾರಿ ವಿನೋದ ಮುಕ್ತೆದಾರ, ಸಿಇಎನ್ ಡಿವೈಎಸ್ ಪಿ ಶಿವಾಂದ ಕಟಗಿ ಸೇರಿದಂತೆ ಧಾರವಾಡ ಗ್ರಾಮೀಣ ಜಿಲ್ಲೆಯ ಎಲ್ಲ ಪೊಲೀಸ್ ವೃತ್ತದ ಪೊಲೀಸ್ ಇನಸ್ಪೆಕ್ಟರ್ ಗಳು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.