ಮೈಸೂರು, ಸೆ.30: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಪೈಕಿ ಸೆ.28ರಂದು ಬೇರೆ ಬೇರೆ ಕಲಾಕೃತಿಗಳನ್ನು ಸಾವಿರಾರು ಡ್ರೋನ್ ಬಳಸಿಕೊಂಡು ಪ್ರದರ್ಶನ ನೀಡಲಾಗಿತ್ತು. ದುರ್ಗದೇವಿ, ಹುಲಿ, ಅಂಬಾರಿ, ಅರ್ಜುನ, ಹೀಗೆ ಅನೇಕ ಪ್ರದರ್ಶನ ನೀಡಿ, ಅಲ್ಲಿ ನೆರೆದಿದ್ದ ಜನರನ್ನು ಖುಷಿ ಪಡಿಸಿತ್ತು. ಈ ಪ್ರದರ್ಶನ ಸೆ.28ರಂದು ಸಂಜೆ ಮೈಸೂರಿನ ಬನ್ನಿಮಂಟಪದ ಟಾರ್ಚ್‌ಲೈಟ್ ಪೆರೇಡ್ ಮೈದಾನದಲ್ಲಿ ನಡೆದಿದೆ. 2,983 ಡ್ರೋನ್‌ಗಳನ್ನು ಬಳಸಿಕೊಂಡು ಈ ಪ್ರದರ್ಶನವನ್ನು ನೀಡಲಾಗಿತ್ತು. ಇದೀಗ ಈ ಪ್ರದರ್ಶನದಲ್ಲಿ ಭಾರೀ ಸದ್ದು ಮಾಡಿದ್ದು ಹುಲಿಯ ಕಲಾಕೃತಿ, ಈ ಕಲಾಕೃತಿ ಗಿನ್ನೆಸ್ ದಾಖಲೆ ಮಾಡಿದೆ. ಈ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ರಾಜು ಮಾಹಿತಿ ನೀಡಿದ್ದಾರೆ
ಈ ವರ್ಷದ ಮೈಸೂರಿನ ಬೀದಿಗಳು ಮತ್ತು ಜಂಕ್ಷನ್‌ಗಳ ದೀಪಾಲಂಕಾರ ಮತ್ತು ಡ್ರೋನ್ ಪ್ರದರ್ಶನವು ‘ಸ್ಮರಣೀಯ’ ಅನುಭವಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ. ಈ ಹಿಂದಿನ ದಾಖಲೆಗಳನ್ನು ಈ ಪ್ರದರ್ಶನ ಬ್ರೇಕ್ ಮಾಡಿ ಎಂದು ಹೇಳಿದ್ದಾರೆ. 1,985 ಡ್ರೋನ್‌ಗಳನ್ನು ಬಳಸಿಕೊಂಡು ಹುಲಿಯ ಕಲಾಕೃತಿಯನ್ನು ರಚಿಸಲಾಗಿದೆ. ಈ ಪ್ರದರ್ಶನಕ್ಕೂ ಮೊದಲು ಪ್ರಾಯೋಗಿಕ ಪ್ರದರ್ಶನ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಅಕ್ಟೋಬರ್ 1 ಮತ್ತು 2 ರಂದು ನಿಗದಿಯಾಗಿದ್ದ ಮುಖ್ಯ ಪ್ರದರ್ಶನಗಳಿಗೆ ಮುಂಚಿತವಾಗಿ ಸೆಪ್ಟೆಂಬರ್ 28 ಮತ್ತು 29 ರಂದು CESC ಎರಡು ಪ್ರಾಯೋಗಿಕ ಪ್ರದರ್ಶನಗಳನ್ನು ಯೋಜಿಸಿತ್ತು.


