ಜಿಎಸ್​ಟಿ ದರ ಪರಿಷ್ಕರಣೆ; ಸಿನಿಮಾ ಟಿಕೆಟ್ ದರದ ಮೇಲಿನ ಜಿಎಸ್​​ಟಿ ಇಳಿಕೆ

Ravi Talawar
ಜಿಎಸ್​ಟಿ ದರ ಪರಿಷ್ಕರಣೆ; ಸಿನಿಮಾ ಟಿಕೆಟ್ ದರದ ಮೇಲಿನ ಜಿಎಸ್​​ಟಿ ಇಳಿಕೆ
WhatsApp Group Join Now
Telegram Group Join Now

ಕೇಂದ್ರ ಸರ್ಕಾರ ಇಂದು (ಸೆಪ್ಟೆಂಬರ್ 04) ಜಿಎಸ್​ಟಿ ದರ ಪರಿಷ್ಕರಣೆ ಮಾಡಿದೆ. ಹಲವು ಅವಶ್ಯಕ ವಸ್ತುಗಳ ಮೇಲಿನ ತೆರಿಗೆ ಇಳಿಸಲಾಗಿದೆ. ಐಶಾರಾಮಿ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಸಿನಿಮಾ ಟಿಕೆಟ್ ದರ ಇಳಿಕೆ ಬಗ್ಗೆ ಹಲವು ಚಿತ್ರರಂಗಗಳಲ್ಲಿ ಚರ್ಚೆ ಜಾರಿಯಲ್ಲಿತ್ತು. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​​ನವರು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿ, ಮನೊರಂಜನಾ ತೆರಿಗೆ ಇಳಿಸುವಂತೆ ಮನವಿ ಮಾಡಿದ್ದರು. ಹಾಗಾಗಿ ಚಿತ್ರರಂಗಕ್ಕೆ ಇಂದಿನ ಸಭೆಯ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಇಂದಿನ ಸಭೆಯ ನಿರ್ಣಯ ಚಿತ್ರರಂಗಕ್ಕೆ ಅಲ್ಪ ಖುಷಿಯನ್ನಷ್ಟೆ ತಂದಿದೆ.

ಇಂದಿನ ಸಭೆಯಲ್ಲಿ ಟಿಕೆಟ್ ದರದ ಮೇಲಿನ ಜಿಎಸ್​​ಟಿ ಇಳಿಕೆ ಮಾಡಲಾಗಿದೆ. ಆದರೆ 100 ರೂಪಾಯಿಗೂ ಕಡಿಮೆ ದರದ ಟಿಕೆಟ್​ಗಳ ಮೇಲಿನ ಜಿಎಸ್​​ಟಿಯನ್ನು ಮಾತ್ರವೇ ಕಡಿತಗೊಳಿಸಲಾಗಿದೆ. ಈ ಹಿಂದೆ 12% ಇದ್ದ ಜಿಎಸ್​​ಟಿಯನ್ನು ಇಳಿಕೆ ಮಾಡಿ 5% ಮಾಡಲಾಗಿದೆ. ಆದರೆ 100 ರೂಪಾಯಿಗಳಿಗೂ ಹೆಚ್ಚು ದರ ಇರುವ ಟಿಕೆಟ್​ಗಳ ಮೇಲೆ ಈ ಹಿಂದೆ ಇದ್ದ 18% ಜಿಎಸ್​​ಟಿಯನ್ನು ಹಾಗೆಯೇ ಮುಂದುವರೆಸಲಾಗಿದೆ.

WhatsApp Group Join Now
Telegram Group Join Now
Share This Article