ಭವಿಷದ ವಿಜ್ಞಾನಿಗಳಿಗೆ, ವಿಜ್ಞಾನವಸ್ತು ಪ್ರದರ್ಶನ ವರದಾನ: ಜಿ ಎಸ್ ಹಂಚಿನಾಳ

Pratibha Boi
ಭವಿಷದ ವಿಜ್ಞಾನಿಗಳಿಗೆ, ವಿಜ್ಞಾನವಸ್ತು ಪ್ರದರ್ಶನ ವರದಾನ: ಜಿ ಎಸ್ ಹಂಚಿನಾಳ
WhatsApp Group Join Now
Telegram Group Join Now

ರನ್ನ ಬೆಳಗಲಿ:ಡಿ.೧., ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಸನ್ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಆವಿಷರ ಅಭಿಯಾನದಡಿಯಲ್ಲಿ “ವಿಜ್ಞಾನ ವಸ್ತು ಪ್ರದರ್ಶನ” ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆ ವಹಿಸಿದ ಜಿ ಎಸ್ ಹಂಚಿನಾಳ ಮುಖ್ಯ ಶಿಕ್ಷಕ ಭವಿಷದ ವಿಜ್ಞಾನಿಗಳಿಗೆ, ವಿಜ್ಞಾನವಸ್ತು ಪ್ರದರ್ಶನ ವರದಾನವಾಗಿದೆ.ಶಾಲಾ ಹಂತದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಭವಿಷದ ವಿಜ್ಞಾನಿಗೆ ಬೇಕಾಗುವ ಜ್ಞಾನ ಪಡೆಯಲು ಈ ಒಂದು ವಿಜ್ಞಾನ ವಸ್ತುಪ್ರದರ್ಶನ ಪೂರಕವಾಗಿದೆ ಎಂದು ತಿಳಿಸಿದರು.ಗ್ರಾ.ಪಂ ಸದಸ್ಯರಾದ ಹಣಮಂತ ಕಣಬೂರ ಮತ್ತು ಯಲ್ಲಪ್ಪ ಲೋಗಾಂವಿ ಇರ್ವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸ್ಥಳೀಯ ೩೧೦ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನ ವಿಕ್ಷಿಸಿದರು.೬೧ ಮಾದರಿಗಳನ್ನು ೧೨೨ ವಿದ್ಯಾರ್ಥಿಗಳು ತಯಾರಿಸಿ, ಪ್ರತಿ ಮಾದರಿಯ ಮಾಹಿತಿಯನ್ನು ನೀಡಿದರು. ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಏರ್ಪಡಿಸಿ. ಪ್ರಥಮ,ದ್ವಿತಿಯ ಹಾಗೂ ತೃತಿಯ ಸ್ಥಾನ ಪಡೇದ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು ಮತ್ತು ಐದು ಸಮಾದಾನಕರ ಬಹುಮಾನ ವಿತರಿಸಿ ಗಣ್ಯರು ಅಭಿನಂದಿಸಿದರು.
ಅತಿಥಿಗಳು ಮಾದರಿಗಳನ್ನು ವಿಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ವ? ಹೆಚ್ಚಿನ ಶಾಲೆಗಳು ಭಾಗವಹಿಸುವಂತೆ ಕಾರ್ಯಕ್ರಮ ಆಯೋಜಿಸಿ ಎಂದು ತಿಳಿಸಿದರು. ವಿಜ್ಞಾನ ಶಿಕ್ಷಕರಾದ ಜಯಶ್ರೀ ದೇವಧರ ಹಾಗೂ ಎಚ್ ಎಸ್ ಲೋಗಾಂವಿ ನಿರ್ಣಾಯಕರಾಗಿ ನಿರ್ಣಯ ನೀಡಿದರು.
ಎಸ್ ಡಿ ಎಮ್ ಸಿ ಅದ್ಯಕ್ಷ ಸುಭಾಸ ಕೊಪ್ಪದ ಸದಸ್ಯರಾದ ಈರಪ್ಪ ಉಪ್ಪಾರ,ಪರಪ್ಪ ಪಾಯನ್ನವರ,ಹಣಮಂತ ಮಡಿವಾಳರ ವೇದಿಕೆ ಮೇಲೆ ಉಪಸ್ಥಿತರಿದ್ದರು.ಶಿಕ್ಷಕ ಶೇಖರ ರಾಠೋಡ ವೇದಿಕೆ ಗನ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

WhatsApp Group Join Now
Telegram Group Join Now
Share This Article