ಬೆಳಗಾವಿ, ನವೆಂಬರ್ 4: ಗೃಹ ಲಕ್ಷ್ಮಿ ಯೋಜನೆಯಡಿ ಬದ ಹಣದಲ್ಲಿ ಮಹಿಳೆಯೊಬ್ಬರು ಖಾರ ಪುಡಿ ಮಾಡುವ ಯಂತ್ರ ಖರಿದೀಸಿದ್ದಾರೆ. ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಖದೀಸಿದ ಯಂತ್ರವನ್ನು, ಆಕೆಯ ಕಿರು ಉದ್ದಿಮೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡಿದ್ದಾರೆ. ಗೃಹ ಲಕ್ಷ್ಮಿ ಹಣದಲ್ಲಿ ಅನೇಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಸಚಿವೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಗೃಹ ಲಕ್ಷ್ಮಿ ಹಣದಲ್ಲಿ ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿಸಿದ್ದು ಸುದ್ದಿಯಾಗಿತ್ತು. ಯೋಜನೆಯಡಿ ಬಂದ ಹಣದ ಸಹಾಯದಿಂದ ಮಹಿಳೆಯೊಬ್ಬರು ಮಗನಿಗೆ ದ್ವಿಚಕ್ರ ವಾಹನ ಖರೀದಿಸಿ ಕೊಟ್ಟಿದ್ದೂ ಸುದ್ದಿಯಾಗಿತ್ತು. ಇದೀಗ ಅದಕ್ಕೆ ಹೊಸದೊಂದು ಸೇರ್ಪಡೆಯಾಗಿದೆ.