ಬೆಳಗಾವಿ ೨೩: ನಗರದ ಬಿ.ಕೆ. ಮಾಡೆಲ್ ಪ್ರೌಢಶಾಲೆಯು ೧೦೦ ವರ್ಷಗಳನ್ನು ಪೂರೈಸಿದ್ದರ ಅಂಗವಾಗಿ ಜರುಗಿದ ಶತಮಾನೋತ್ಸವದಲ್ಲಿ ೧೯೯೨ನೇ ಸಾಲಿನ ಕನ್ನಡ ಮಾಧ್ಯಮದ ಬಿ.ಕೆ ಮಾಡೆಲ್ ಮತ್ತು ಉಷಾತಾಯಿ ಗೋಗಟೆ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಕಲಿಸಿದ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವನ್ನು ರವಿವಾರ ಶಾಲೆಯ ಸಭಾಗ್ರಹದಲ್ಲಿ ಹಮ್ಮಿಕೊಂಡಿದ್ದರು.
ನಿವೃತ್ತ ಶಿಕ್ಷಕರಾದ ಜಿ ಆರ್ ಜೋಶಿ, ಜಿ.ಬಿ ಕುಲಕರ್ಣಿ, ಉಮೇಶ ಕುಲಕರಣಿ, ಕೆ.ಎಲ್ ಮಜುಕರ್, ಎ.ಎಸ್. ಬಾಗೇವಾಡಿ, ಸುಲಭಾ ಒಡೆಯರ್ (ಜೋಶಿ) ಹಾಗೂ ಎಲ್.ಎಸ್. ಕುಲಕರಣಿ (ಮುರನಾಳ) ಅವರನ್ನು ಗೌರವಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಬಹು ಸಂಖ್ಯೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳೆಲ್ಲರೂ ತಾವು ಶಾಲಾ ಜೀವನದಲ್ಲಿ ಆಡಿ ಪಾಡಿ ಹಾಡಿ ನಲಿದು ಕೂಡಿ ಕಳೆದ ದಿನಗಳನ್ನು ನೆನಪಿಸಿಕೊಂಡು ಗುರುಗಳಿಗೆ ಧನ್ಯತೆಯನ್ನು ಅನುಭವಿಸಿದರು, ಒಟ್ಟಾರೆ ಗುರು ಶಿಷ್ಯರ ಪ್ರಾಚೀನ ಪರಂಪರೆಯನ್ನು ಮತ್ತೊಮ್ಮೆ ನೆನಪಿಸಿತು. ಇದೇ ಸಂದರ್ಭದಲ್ಲಿ ೧೯೯೨ನೇ ಸಾಲಿನ ವಿದ್ಯಾರ್ಥಿಗಳು ಸಂಗ್ರಹಿಸಿದ ೨,೬೬,೦೦೦ರೂ.ಗಳನ್ನು ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಅಧ್ಯಕ್ಷರಾದ ಅವಿನಾಶ ಪೋದ್ದಾರರಿಗೆ ಸಲ್ಲಿಸಿದರು. ಈ ಕಾರ್ಯಕ್ರಮದ ಮುಂದಾಳತ್ವವನ್ನು ಹಳೆಯ ವಿದ್ಯಾರ್ಥಿ ಪ್ರಮೋದ ಮೂಲಂಗಿ ವಹಿಸಿದ್ದರು, ಸಂತೋಷ ಜೋಶಿ ನಿರೂಪಿಸಿದರು.


