ನಾಳೆ ಕೆಂಭಾವಿಯಲ್ಲಿ ಷರತ್ತುಬದ್ಧ ಆರ್​ಎಸ್​ಎಸ್​ ಪಥಸಂಚಲನಕ್ಕೆ ಗ್ರೀನ್​ ಸಿಗ್ನಲ್

Ravi Talawar
ನಾಳೆ ಕೆಂಭಾವಿಯಲ್ಲಿ ಷರತ್ತುಬದ್ಧ ಆರ್​ಎಸ್​ಎಸ್​ ಪಥಸಂಚಲನಕ್ಕೆ ಗ್ರೀನ್​ ಸಿಗ್ನಲ್
WhatsApp Group Join Now
Telegram Group Join Now

ಯಾದಗಿರಿ:  ಕೆಂಭಾವಿ ಪಟ್ಟಣದ ಪುರಸಭೆ ಮುಂಭಾಗದಿಂದ ಆರಂಭವಾಗಿ, ಪಟ್ಟಣದ ಪ್ರಮುಖ ಬೀಡಿಗಳಲ್ಲಿ ಸಂಚರಿಸುವ ಈ ಪಥಸಂಚಲನವು ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಂದರ್ಭದ ಭಾಗವಾಗಿದೆ. ಆದರೆ ಈ ಅನುಮತಿಯು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಷರತ್ತುಗಳೊಂದಿಗೆ ನೀಡಲಾಗಿದೆ  ಆರ್ಎಸ್ಎಸ್​ ಪಥಸಂಚಲನ ಮಂಗಳವಾರ ಬೆಳಿಗ್ಗೆ 9:30ಕ್ಕೆ ಕೆಂಭಾವಿ ಪುರಸಭೆ ಮುಂಭಾಗದಿಂದ ಆರಂಭವಾಗಿ, ಪಟ್ಟಣದ ಮುಖ್ಯ ಬೀಡಿಗಳಾದ ರೈಲ್ವೇ ಸ್ಟೇಷನ್ ರಸ್ತೆ, ಮಾರುಕಟ್ಟೆ ಬೀಡಿ ಮತ್ತು ಗ್ರಾಮ ಪಂಚಾಯಿತಿ ಬಳಿಯವರೆಗೆ ಸಂಚರಿಸುತ್ತದೆ. ಸುಮಾರು 500 ಸ್ವಯಂಸೇವಕರು ಭಾಗವಹಿಸಲಿದ್ದಾರೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. ಇದು ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಮಾರಂಭದ ಭಾಗವಾಗಿದ್ದು, ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೂ ಹಿಂದಿನ ಘಟನೆಗಳಲ್ಲಿ ಇಂತಹ ಮಾರ್ಚ್‌ಗಳು ವಿವಾದಕ್ಕೆ ಕಾರಣವಾಗಿವೆ, ಆದ್ದರಿಂದ ಜಿಲ್ಲಾಡಳಿತವು ಎಚ್ಚರಿಕೆಯಿಂದ ನಿರ್ಧರಿಸಿದೆ.

ಇನ್ನೂ  ಆರ್ಎಸ್ಎಸ್​​ ಪಥಸಂಚಲನಕ್ಕೆ ಅನುಮತಿಯ ಷರತ್ತುಗಳು ಕಟ್ಟುನಿಟ್ಟಾಗಿವೆ. ಮೊದಲು, ಪಥಸಂಚಲನದಲ್ಲಿ ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾದರೆ, ಸಂಘಟನೆಯ ಮುಖಂಡರು ಸಂಪೂರ್ಣ ಖರ್ಚು ಭರಿಸಬೇಕು. ಎರಡನೇ, ಪೊಲೀಸ್ ಇಲಾಖೆ ನಿಗದಿಪಡಿಸಿದ ಮಾರ್ಗದಲ್ಲಿಯೇ ಸಂಚಲನ ನಡೆಸಬೇಕು. ಸಂಘಟನೆಯವರು ಪೊಲೀಸ್ ಭದ್ರತೆಯನ್ನು ಸ್ವೀಕರಿಸಬೇಕು. ಮೂರನೇ, ಯಾವುದೇ ಜಾತಿ, ಧರ್ಮ ಅಥವಾ ಸಮುದಾಯಕ್ಕೆ ನೋವುಂಟು ಮಾಡುವ ಘೋಷಣೆಗಳು ಅಥವಾ ಕೂಗುಗಳು ಇರಬಾರದು.

WhatsApp Group Join Now
Telegram Group Join Now
Share This Article