ಹಡಪದ ಅಭಿವೃದ್ಧಿ ನಿಗಮ. ಸರ್ಕಾರಕ್ಕೆ ಕೃತಜ್ಞತೆ 

Ravi Talawar
ಹಡಪದ ಅಭಿವೃದ್ಧಿ ನಿಗಮ. ಸರ್ಕಾರಕ್ಕೆ ಕೃತಜ್ಞತೆ 
WhatsApp Group Join Now
Telegram Group Join Now
ಬೈಲಹೊಂಗಲ:ರಾಜ್ಯ ಸರ್ಕಾರವು  ಹಡಪದ ಸಮಾಜದ ಅಭಿವೃದ್ಧಿ ನಿಗಮವನ್ನು ಸಂಪೂರ್ಣವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಈ ನಿಗಮವನ್ನು ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 7(2) ರ ಅಡಿಯಲ್ಲಿ ನೋಂದಾಯಿಸಲು ದಿನಾಂಕ 17-10-2025 ರಂದು ಆದೇಶ ಹೊರಡಿಸಿದ್ದು ಇದು ಅತ್ಯಂತ ಸಂತೋಷದ ಸಂಗತಿ, ಸುಕ್ಷೇತ್ರ ತಂಗಡಗಿಯ ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ, ರಾಜ್ಯ ಹಡಪದ ಸಮಾಜದ ಹಲವಾರು ವರ್ಷಗಳ ಹೋರಾಟದ ಫಲವಾಗಿ  ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಸಾಹೇಬರಿಗೆ ಈ ನಿಗಮ ಸಂಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಸಹಕರಿಸಿದ ಘನ ಸರ್ಕಾರಕ್ಕೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ತುಂಬು ಹೃದಯದ ಧನ್ಯವಾದಗಳನ್ನು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article