ಬಳ್ಳಾರಿ 24..ಭಾನುವಾರ ನ. 23: ಬಳ್ಳಾರಿಯ ಶ್ರೀ ಕಳಿಕಾ ಕಮಟೇಶ್ವರ ದೇವಸ್ಥಾನದಲ್ಲಿ ಗಿನ್ನಿಸ್ ಬುಕ್ ರೆಕಾರ್ಡ್ಸ್ ಹಾಗೂ ಪದ್ಮಭೂಷಣ ಪುರಸ್ಕೃತರಾದ ಶ್ರೀಮತಿ ಭಾಗ್ಯಲಕ್ಷ್ಮಿ – ಡಾ. ಶ್ರೀರಾಜಣ್ಣ ಮಂಡ್ಯ ಅವರು ವಿಶೇಷ ಆಗಮನ ನೀಡಿದರು. ಇವರನ್ನು ದೇವಸ್ಥಾನ ಅಧ್ಯಕ್ಷರು ಎಂ.ಕೆ. ರವೀಂದ್ರ (ವಿಶ್ವಬ್ರಾಹ್ಮಣ ವೈದಿಕ ಪ್ರತಿಷ್ಠಾನ ಟ್ರಸ್ಟ್), ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಪತ್ತಾರ್, ವಿಶ್ವಕರ್ಮ ನಿಗಮದ ನಿರ್ದೇಶಕರು ಚಂದ್ರಶೇಖರ್, ಸದಸ್ಯರಾದ ಪ್ರಕಾಶ್ ಪತ್ತಾರ್, ಮಂಜುನಾಥ್ ಕೆ, ಶ್ರೀಮತಿ ಕೃಷ್ಣನಂದ ಹಾಗೂ ಅರ್ಚಕರಾದ ರಾಜು ಕೆ., ಮಲ್ಲಿಕಾರ್ಜುನ ಕೆ., ಶ್ರೀಮತಿ ಪದ್ಮಾವತಿ, ಸುಭಾಷ್ ಆಚಾರ್ಯ, ಗಾಯತ್ರಿ ಮಹಿಳಾ ಮಂಡಳಿ ಸದಸ್ಯರು ಸೇರಿ ಭವ್ಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಅಧ್ಯಕ್ಷರು, ವಿಶ್ವಕರ್ಮ ಸಂಘದ ಪದಾಧಿಕಾರಿಗಳು — ಚಂದ್ರಶೇಖರ್ ಆಚಾರ್, ಮಂಜುನಾಥ್ ಕುಕ್ಕರ್ ಕೇಡು, ಪ್ರಕಾಶ್ ಪತ್ತಾರ್, ತ್ರಿವೇಣಿ ಪತ್ತಾರ್, ಅರ್ಚಕರಾದ ರಾಜೇಶ ಆಚಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ಸಮ್ಮೇಳನ ಕಾರ್ಯಕ್ರಮಕ್ಕೆ ವಿಕಲಚೇತನ ಕಲಾವಿದ ಕೆ.ಎಸ್. ರಾಜನ್ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡುವಂತೆ ಸಭೆಯಲ್ಲಿ ವಿನಂತಿ ವ್ಯಕ್ತವಾಯಿತು.


