ಮೂಡಲಗಿ : ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ರಾಜ್ಯೋತ್ಸವವನ್ನು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ನಮ್ಮ ಕರವೇ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗಿ ಹೇಳಿದರು.
ಬುಧವಾರದಂದು ಪಟ್ಟಣದ ತಾಲೂಕಾ ಪ್ರಾದೇಶಿಕ ಪತ್ರಕರ್ತ ಸಂಘದ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.1 ರಂದು ಬೆಳಿಗ್ಗೆ 9 ಘಂಟೆಗೆ ಪೇಟೆ ಆವರಣದಲ್ಲಿ ಧ್ವಜಾರೋಹನ ನೆರವೇರಿಸುವುದರ ಮೂಲಕ ಕಾರ್ಯಕ್ರಮ ಚಾಲನೆಗೊಂಡು, ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಕನ್ನಡಾಭಿಮಾನಿಗಳು ಹಾಗೂ ನಮ್ಮ ಕರವೇ ಕಾರ್ಯಕರ್ತರು, ಸೇರಿ ಸಕಲ ವಾದ್ಯಮೇಳಗಳೊಂದಿಗೆ ದೇಶ ಕಂಡ ಮಹಾನ್ ವ್ಯಕ್ತಿಗಳ ಛದ್ಮವೇಶದೊಂದಿಗೆ ಮೆರವಣಿಗೆ ಹೊರಟು ಶ್ರೀ ಬಸವೇಶ್ವರ ವೃತ್ತದಲ್ಲಿರುವ ಧ್ವಜಸ್ಥಂಭಕ್ಕೆ ಧ್ವಜಾರೋಹಣ ನೆರವೇರಿಸುವುದರ ಮೂಲಕ ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದರು.
ಯಾದವಾಡ ಘಟಕದ ನಮ್ಮ ಕರವೇ ಅಧ್ಯಕ್ಷರಾದ ಅಜಯ್ ಜಾಧವ ಮಾತನಾಡಿ, ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಖ್ಯಾತ ಯೂಟೂಬ್ ಕಲಾವಿದರಾದ ಖುಷಿ ಬೆಳಗಾವಿ, ಸುಧಾರಾಣಿ ಮುಧೋಳ, ಭೃಂಗೇಶ್ ಹಂಗರಗಿ ತಂಡದವರು ಭಾಗವಹಿಸುವರು. ಪ್ರತಿ ವರ್ಷ ರಾಜ್ಯೋತ್ಸವದ ಅಂಗವಾಗಿ ಅದ್ಧೂರಿ ವೇದಿಕೆ ಕಾರ್ಯಕ್ರಮ ಜರುಗುತ್ತಿತ್ತು, ಆದರೆ ಈ ವರ್ಷ ನ.2 ರಂದು ದೀಪಾವಳಿ ಹಬ್ಬ ಹಾಗೂ ನ.6 ರಿಂದ ನ.23 ರವರೆಗೆ ಕಾರಣಾಂತರಗಳಿಂದ ತೆರವುಗೊಂಡಿದ್ದ ಸ್ಥಾನಗಳಿಗೆ ಸ್ಥಳೀಯ ಉಪಚುನಾವಣೆ ಘೋಷಣೆ ಆಗಿರುವ ಕಾರಣ ಈ ವರ್ಷದ ವೇದಿಕೆ ಕಾರ್ಯಕ್ರಮವನ್ನು ನವೆಂಬರ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕರವೇ ಯುವ ಘಟಕದ ಅಧ್ಯಕ್ಷರಾದ ಮಾಲೀಕಜಾನ್ ಜಾರೆ ಹಾಗೂ ಯುವ ಘಟಕದ ಪದಾಧಿಕಾರಿಗಳಾದ ವೆಂಕಟೇಶ್ ಇಟ್ಟಣ್ಣವರ್ ಉಪಸ್ಥಿತರಿದ್ದರು.