ಕಾಂಗ್ರೆಸ್ ನಾಯಕರು ಜೈಲ್, ಬೇಲ್, ಕೋರ್ಟ್ ಸುತ್ತ ಗಿರಕಿಹೊಡೆಯುತ್ತಿದ್ದಾರೆ: ಗೋವಿಂದ ಕಾರಜೋಳ ವ್ಯಂಗ್ಯ

Ravi Talawar
ಕಾಂಗ್ರೆಸ್ ನಾಯಕರು ಜೈಲ್, ಬೇಲ್, ಕೋರ್ಟ್ ಸುತ್ತ ಗಿರಕಿಹೊಡೆಯುತ್ತಿದ್ದಾರೆ: ಗೋವಿಂದ ಕಾರಜೋಳ ವ್ಯಂಗ್ಯ
WhatsApp Group Join Now
Telegram Group Join Now

ಹಿರಿಯೂರು, ಏಪ್ರಿಲ 15:   ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಎಲ್ಲಾ ನಾಯಕರು ಭ್ರಷ್ಟಾಚಾರ ಹಾಗೂ ಹಗರಣಗಳಲ್ಲಿ ತಗ್ಲಾಕ್ಕೊಂಡಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದು, ಬೇಲ್ ಮೇಲೆ ಇದ್ದಾರೆ. ಇನ್ನು ಕೆಲವರು ಕೋರ್ಟ್ ಗೆ ಅಲೆಯುತ್ತಿದ್ದಾರೆ ಎಂದು ಎನ್ ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಭಾನುವಾರ ರಾತ್ರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವತಿಯಿಂದ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಾಲಿನಲ್ಲಿ ನಾನು ಕುಳಿತುಕೊಳ್ಳುತ್ತೇನೆ. ಅದೇ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ರಾಹುಲ್ ಗಾಂಧಿಯವರ ಹಿಂಭಾಗದಲ್ಲಿ ಕೂರಬೇಕಾಗುತ್ತದೆ. 30 ಇದ್ದಿದ್ದು,‌ 31 ಆಗಬಹುದು ಅಷ್ಟೇ ಹಾಗಾಗಿ ಆಡಳಿತ ಪಕ್ಷದ ಸದಸ್ಯ ಲೋಕಸಭೆಯಲ್ಲಿ ಇರಬೇಕು ಆಗಾಗಿ ಬಿಜೆಪಿ ಅಭ್ಯರ್ಥಿನ ಬೆಂಬಲಿಸಿ ಆಶಿರ್ವಾದ ಮಾಡಬೇಕು ಎಂದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಯಾವುದೇ ಒಂದೇ ಒಂದು ಪ್ರಕರಣಗಳಿಲ್ಲ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಕಳಂಕ ರಹಿತವಾಗಿ ಆಡಳಿತ ನಡೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 2014ರಲ್ಲಿ ಈಗಿನ ಕಾಂಗ್ರೆಸ್ ಅಭ್ಯರ್ಥಿ ಬಿಎನ್‌ ಚಂದ್ರಪ್ಪ ಗೆದ್ದಿದ್ದರು. ಆಗ ಜಿಲ್ಲೆಗೆ ಚಂದ್ರಪ್ಪನವರ ಅಭಿವೃದ್ಧಿ ಶೂನ್ಯವಾಗಿತ್ತು. ಈ ಬಾರಿ ಚುನಾವಣೆಯಲ್ಲಿ ತಾವೆಲ್ಲರೂ ಮನೆ ಮನೆಗೆ ತೆರಳಿ ಮತದಾನ ಮಾಡಿಸಬೇಕು ಎರಡು ಪಕ್ಷಗಳ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ನಾಳೆಯಿಂದ ಮನೆ ಮನೆಗೆ ತೆರಳಿ ಮತಯಾಚನೆ ಮಾಡಬೇಕು ಎಂದು ಕರೆ ನೀಡಿದರು.

ಬರದಿಂದ ರೈತರಿಗೆ ಬೆಳೆ ಕೈ ಸಿಕ್ಕಿಲ್ಲ. ಕಿಸಾನ್ ಸನ್ಮಾನ ಯೋಜನೆಯ ಜೊತೆಗೆ ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆಯಲ್ಲಿ ರೈತರಿಗೆ ಜಿಲ್ಲೆಯಲ್ಲಿ 284 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಿಂದ ರೈತರಿಗೆ ಸಾವಿರ ಸಾವಿರ ಹಣ ಬಂದಿದೆ. ಇದರಿಂದ ಬರಗಾಲದ ಪರಿಸ್ಥಿತಿಯಲ್ಲಿ ಸಹಾಯವಾಗಿದೆ ಎಂದರು

 

WhatsApp Group Join Now
Telegram Group Join Now
Share This Article