ವಿಜಯ ನಗರ ( ಹೊಸಪೇಟೆ) : ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ವಿಜಯನಗರ ಜಿಲ್ಲೆಗೆ, ಭೇಟಿ ನೀಡಿ ಇಲ್ಲಿನ ವಿಶ್ವಪ್ರಸಿದ್ದ ಹಂಪೆಯ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರು ದೇವಸ್ಥಾನ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಜಾರಾಜನಿಂದ ಹೂವಿನ ಹಾರ ಹಾಕಿ ಅವರನ್ನು ಸನ್ಮಾನಿಸಲಾಯಿತು. ಅವರ ಭೇಟಿಯ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮತ್ತು ಗಣ್ಯರು ಉಪಸ್ಥಿತರಿದ್ದರು.
ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹಂಪಿಯ ಐತಿಹಾಸಿಕ ಪ್ರಸಿದ್ದ ಶ್ರೀ ಉಗ್ರ ನರಸಿಂಹ ಪ್ರತಿಮೆ ವೀಕ್ಷಿಸಿದರು. ಅದಕ್ಕೂ ಮುನ್ನ ಅವರು ಕುಟುಂಬ ಸಮೇತ ಜಿಲ್ಲೆಯ ತುಂಗಭದ್ರಾ ಜಲಾಶಯ ವೀಕ್ಷಿಸಿ ಸಂತೋಷಿಸಿದರು. ನಂತರ ಕೊಪ್ಪಳ ಜಿಲ್ಲೆಯ ಅಂಜನಾದ್ರಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದರು. ಆಂಜನಾದ್ರಿ ಯ 575 ಮೆಟ್ಟಿಲುಗಳನ್ನು 30 ನಿಮಿಷ ದಲ್ಲಿ ಇಳಿದರು. ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ , ಸಿ. ಇ. ಓ ವರ್ಣಿತ್ ನೇಗಿ, ಎಸ್. ಪಿ. ರಾಮ್ ಎಲ್. ಆರ್ಸಿದ್ದಿ ಇದ್ದರು.