ಮೂಡಲಗಿ : ಬರಿದಾದ ಎದೆಯಲ್ಲಿ ಅಕ್ಷರಗಳನ್ನು ಬಿತ್ತಿ ಬದುಕಿಗೆ ದಾರಿ ತೋರಿದ ನಮ್ಮೂರ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಿರುವುದಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ಶನಿವಾರ ಸಮೀಪದ ಮುಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದರ ಅನುದಾನದಲ್ಲಿ ನಿರ್ಮಾಣವಾದ ರಂಗಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಅನ್ನ ಆರೋಗ್ಯ ಅಕ್ಷರ ಹಾಗೂ ಆಶ್ರಯ ಇವು ಮನುಷ್ಯನಿಗೆ ಬೇಕಾದ ಬೇಕಾದ ನಾಲ್ಕು ಆಧಾರ ಸ್ಥಂಬಗಳು ಇವುಗಳಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವದೇ ಅಕ್ಷರ ಜ್ಞಾನ, ಅಂತಹ ಅಕ್ಷರ ಜ್ಙಾನ ದೇಗುಲದ ಶತಮಾನೋತ್ಸವ ಸಮಾರಂಭದಲ್ಲಿ ಇಡೀ ಗ್ರಾಮದ ಹಳೆಯ ವಿದ್ಯಾರ್ಥಿಗಳು ಸೇರಿ ಅಭಿವೃದ್ದಿ ಪಡಿಸುವ ಮೂಲಕ ಒಳೆಯ ಕಾರ್ಯಕ್ಕೆ ಮುನ್ನುಡಿ ಹಾಕಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ ಶೆಟ್ಟರ ಮಾತನಾಡಿ, ಇಂಗ್ಲೀಷ ಕಲಿತರೆ ಮಾತ್ರ ನಾವು ಜಾಣರು ಎಂಬ ತಪ್ಪು ಕಲ್ಪನೆಯನ್ನು ಪಾಲಕರು ಬೀಡಬೇಕು ನಾನು ಸಹ ಮಾತೃ ಭಾಷೆಯಲ್ಲಿಯೇ ಕಲಿತು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ ಎಂದರು. ನಂತರ ವಿಪ ಸದಸ್ಯ ಹಣಮಂತ ನಿರಾಣಿ ಹಾಗೂ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿದರು.
ದಿವ್ಯ ಸಾನಿದ್ಯವಹಿಸಿದ ಹೊಸಗುರ್ಗದ ಪುರುಷೊತ್ತಮಾನಂದ ಪುರಿ ಮಹಾಸ್ವಾಮಿಗಳು, ಗೋಕಾಕದ ಶ್ರೀ ಬಸವಪ್ರಭು ಮಹಾಸ್ವಾಮಿಗಳು, ಹಂದಿಗುಂಡದ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನಿದ್ಯವಹಿಸಿ ಆಶಿರ್ವಚನ ನೀಡಿದರು. ನಿವೃತ್ತ ಶಿಕ್ಷಕ ನಿಂಗಪ್ಪ ಯಕ್ಕುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಶಿಕ್ಷಣ ಇಲಾಖೆಯ ಡಿ.ವಾಯ್.ಪಿ.ಸಿ ರೇವತಿ ಮಠದ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹೀರೆಮಠ, ಬಿಜೆಪಿ ಜಿಲ್ಲಾಧ್ಯಕ್ಷ ಸುಬಾಸ ಪಾಟೀಲ, ಎಸ್ ಡಿ ಎಮ್ ಸಿ ಅದ್ಯಕ್ಷ ಬಾಲಗೌಡ ಪಾಟೀಲ, ಓಸಾಟ್ ಸಂಸ್ಥೆಯ ಗೋಪಾಲ ಹಂಜಕ್ಕಿ, ಬಸವರಾಜ ಗಾಡವಿ, ಪ್ರಕಾಶ ಗೊಂಧಿ, ನಿಂಗಪ್ಪ ಯಕ್ಕುಂಡಿ, ಸಂಜು ಹೊಸಕೋಟಿ, ಬಾಳಪ್ಪ ಗಂಗನ್ನವರ, ಮುರಗೇಪ್ಪ ಗಾಡವಿ, ಶಿವಾನಂದ ಕಂಬಾರ, ಬಾಳೇಶ ಬುಜನ್ನವರ, ಮಲ್ಲಕಾರ್ಜುನ ಬುಜನ್ನವರ, ನಿಂಗಪ್ಪ ಬಡ್ನಿಂಗೋಳ ಇದ್ದರು. ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಸತ್ಕರಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಸುಭಾಪೂರಮಠ ಸ್ವಾಗತಿಸಿದರು, ಶಿಕ್ಷಕ ಎಸ್ ಕೆ ಮಠದ ನಿರೂಪಿಸಿದರು, ಪ್ರಭಾರಿ ಮುಖ್ಯೋಪಾಧ್ಯಾಯ ಶಂಕರ ಗಾಡವಿ ವಂದಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ; ಈರಣ್ಣ ಕಡಾಡಿ ಹರ್ಷ


