ಡೆಂಗ್ಯೂ ಹೆಚ್ಚಳ: ಆಸ್ಪತ್ರೆಗಳಲ್ಲಿ ಬೆಡ್‌ ಕಾಯ್ದಿರಿಸುವಂತೆ ಸರ್ಕಾರ ಆದೇಶ

Ravi Talawar
ಡೆಂಗ್ಯೂ ಹೆಚ್ಚಳ: ಆಸ್ಪತ್ರೆಗಳಲ್ಲಿ ಬೆಡ್‌ ಕಾಯ್ದಿರಿಸುವಂತೆ ಸರ್ಕಾರ ಆದೇಶ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಆತಂಕಕಾರಿಯಾಗಿ ಹೆಚ್ಚಾಗುತ್ತಿದ್ದು, ಡೆಂಗ್ಯೂ ಸಂಬಂಧಿತ ಸಾವುನೋವುಗಳನ್ನು ತಡೆಗಟ್ಟಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆಯು ಡೆಂಗ್ಯೂ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಬೆಡ್ ಗಳನ್ನು ಕಾಯ್ದಿರಿಸುವಂತೆ ಬುಧವಾರ ಆದೇಶಿಸಿದೆ.

ಮುಂದಿನ ಸೂಚನೆವರೆಗೆ ಡೆಂಗ್ಯೂ ರೋಗಿಗಳಿಗೆ ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ (25 ಹಾಸಿಗೆಗಳು), ಸಿವಿ ರಾಮನ್ ಆಸ್ಪತ್ರೆ (25 ಹಾಸಿಗೆಗಳು), ಜಿಎಚ್ ಜಯನಗರ(25 ಹಾಸಿಗೆಗಳು), ತಾಲೂಕು ಆಸ್ಪತ್ರೆ, ಯಲಹಂಕ (10) ಹಾಸಿಗೆಗಳು), ಮತ್ತು ತಾಲೂಕು ಆಸ್ಪತ್ರೆ, ಕೆಆರ್ ಪುರಂ (10 ಹಾಸಿಗೆಗಳು), ಮತ್ತು ಜಿಲ್ಲಾ ಕೇಂದ್ರದ ಎಚ್‌ಎಫ್‌ಡಬ್ಲ್ಯೂ ಆಸ್ಪತ್ರೆಗಳು ತಲಾ 10 ಹಾಸಿಗೆಗಳನ್ನು ಕಾಯ್ದಿರಿಸಲು ಹಾಗೂ ತಾಲೂಕು ಕೇಂದ್ರದ ಎಚ್‌ಎಫ್‌ಡಬ್ಲ್ಯೂ ಆಸ್ಪತ್ರೆಗಳಲ್ಲಿ ತಲಾ ಐದು ಹಾಸಿಗೆಗಳನ್ನು ಡೆಂಗ್ಯೂ ರೋಗಿಗಳಿಗೆ ಮೀಸಲಿಡುವಂತೆ ಸೂಚಿಸಲಾಗಿದೆ.

ಈ ಹಿಂದಿನ ಆದೇಶಗಳಿಗೆ ಹೆಚ್ಚುವರಿಯಾಗಿ ಈ ನಿರ್ದೇಶನ ನೀಡಲಾಗಿದೆ. ಮುಂದಿನ ಆದೇಶದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ರಾಜ್ಯದಲ್ಲಿ ಇದುವರೆಗೆ 10,973 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4,040 ಬಿಬಿಎಂಪಿ ವ್ಯಾಪ್ತಿಯಲ್ಲಿ, 63 ಬೆಂಗಳೂರು ನಗರ ಮತ್ತು 51 ಬೆಂಗಳೂರು ಗ್ರಾಮಾಂತರದಲ್ಲಿ ವರದಿಯಾಗಿವೆ. ಚಿಕ್ಕಮಗಳೂರಿನಲ್ಲಿ ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಟ್ಟು 621 ಪ್ರಕರಣಗಳು ದಾಖಲಾಗಿವೆ.

 

WhatsApp Group Join Now
Telegram Group Join Now
Share This Article