‘ಯುವ ಎಐ ಫಾರ್ ಆಲ್’ ತರಬೇತಿ ಆರಂಭಿಸಿದ ಭಾರತ ಸರ್ಕಾರ

Ravi Talawar
‘ಯುವ ಎಐ ಫಾರ್ ಆಲ್’ ತರಬೇತಿ ಆರಂಭಿಸಿದ ಭಾರತ ಸರ್ಕಾರ
WhatsApp Group Join Now
Telegram Group Join Now

ನವದೆಹಲಿ, ನವೆಂಬರ್ 19: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಎಐ(ಕೃತಕ ಬುದ್ಧಿಮತ್ತೆ)ನದ್ದೇ ಕಾರುಬಾರು. ಹಾಗಾಗಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಕ್ರೇಜ್ ಹಾಗೂ ಅಗತ್ಯಗಳನ್ನು ಗುರುತಿಸಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಲ್ಲರಿಗೂ ‘‘ಯುವ ಎಐ’’ ಎಂಬ ಉಚಿತ ಎಐ ಕೋರ್ಸ್​​ ಅನ್ನು ಪ್ರಾರಂಭಿಸಿದೆ. ಈ ಉಚಿತ ರಾಷ್ಟ್ರೀಯ ಕೋರ್ಸ್ ಮೂಲಕ​ ಪ್ರತಿಯೊಬ್ಬ ಭಾರತೀಯನಿಗೂ ಕೃತಕ ಬುದ್ಧಿಮತ್ತೆ ಬ್ಗಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ.

Yuva AI For All ಎಂಬುದು ಕೇವಲ ನಾಲ್ಕೂವರೆ ಗಂಟೆಯ ಕೋರ್ಸ್​  ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಇಂಡಿಯಾ ಎಐ ಮಿಷನ್ ಅಡಿಯಲ್ಲಿ ‘ Yuva AI For All ’ಎಂಬ ಕೋರ್ಸ್ ಅನ್ನು ಪ್ರಾರಂಭಿಸಿದೆ. ಈ ಕೋರ್ಸ್ ಸಂಪೂರ್ಣವಾಗಿ ಉಚಿತ ಮತ್ತು ಯಾರು ಬೇಕಾದರೂ ಇದನ್ನು ಕಲಿಯಬಹುದು. ಎಲ್ಲಾ ಭಾರತೀಯ ನಾಗರಿಕರಿಗೆ, ವಿಶೇಷವಾಗಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ಬಗ್ಗೆ ಪರಿಚಯಿಸುವುದು ಮತ್ತು ಕಲಿಸುವುದು ಇದರ ಉದ್ದೇಶವಾಗಿದೆ . ಈ ಕೋರ್ಸ್‌ನ ಅವಧಿ ಒಂದು ದಿನವೂ ಅಲ್ಲ. ಹೌದು, ಇದು ಕೇವಲ 4.5 ಗಂಟೆಗಳು. ಇದರರ್ಥ ಯಾರಾದರೂ ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸದೆ ಕೋರ್ಸ್ ಅನ್ನು ಪೂರ್ಣಗೊಳಿಸಬಹುದು.

WhatsApp Group Join Now
Telegram Group Join Now
Share This Article