ಬಳ್ಳಾರಿ :02.. ಇತ್ತೀಚೆಗೆ ನಗರದ ಹೊರ ಹೊಲಯದಲ್ಲಿರುವ ಜ್ಞಾನಾಮೃತ ಶಾಲೆಯಲ್ಲಿ 2025 -26 ನೇ ಸಾಲಿನ 17 ವರ್ಷದ ಒಳಗಿನ ಆಟಗಾರರಲ್ಲಿ ನಡೆದ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ( ಕರ್ನಾಟಕ ಪಬ್ಲಿಕ್ ಸ್ಕೂಲ್) ಬಾಲಕಿಯರ ತಂಡ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ
ತಾಲೂಕು ಮಟ್ಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಶಾಲೆಯ ಉಪ ಪ್ರಾಂಶುಪಾಲರಾದ ಜಿ ಮನೋಹರ್ ತಿಳಿಸಿದ್ದಾರೆ. ಖೋ ಖೋ ಪಂದ್ಯಾವಳಿಯಲ್ಲಿ ಜಯಶಾಲಿಯಾದ ತಂಡದೊಂದಿಗೆ ಭಾವಚಿತ್ರವನ್ನು ತೆಗೆದುಕೊಂಡು ತಂಡದ ಆಟಗಾರರನ್ನು ಅಭಿನಂದಿಸಿ, ಜಿಲ್ಲಾಮಟ್ಟದಲ್ಲಿ ಜಯಶಾಲಿಯಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರು, ಶಾಲೆಯ ಶಿಕ್ಷಕ ಶಿಕ್ಷಕಿಯರು ತಂಡದ ಆಟಗಾರರಿದ್ದರು.