ಇಂಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಗಷ್ಟ ೧ ಮತ್ತು ೨ ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಥಮ ಹಂತದ ಕಲಿಕಾ ಸಾಮರ್ಥ್ಯ ಮತ್ತು ಕಾಲೇಜಿನಲ್ಲಿ ನಡೆಯುವ ಶಾರೀರಿಕ, ಬೌದ್ಧಿಕ, ಸಾಂಸ್ಕೃತಿಕ ಅಬ್ಯಾಸಗಳ ಮಾಹಿತಿ ತಿಳಿಸಿಕೊಡುವದು, ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡಾವಳಿಕೆ ಯಾವತರನಾಗಿರಬೇಕು ಎಂದು ತಿಳಿಸಿಕೊಡುವ ಉದ್ದೇಶದಿಂದ ಸರ್ಕಾರ ಹೊಂಬೇಳಕು ಎಂಬ ಕಾರ್ಯಕ್ರಮ ಆಯೋಜಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿವೇಕಾನಂದ ಉಘಡೆ ಮಾತನಾಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಝಳಕಿ ಅಗಷ್ಟ ೦೧ ಮತ್ತು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಕಾಲೇಜು ಸಭಾಂಗಣದಲ್ಲಿ “ಹೊಂಬೆಳಕು” ಹೊಸ ಆರಂಭ, ಅನಂತ ಸಾಧ್ಯತೆಗಳು ಎಂಬ ಶೀರ್ಷಿಕೆಯೊಂದಿಗೆ ಓರಿಯೆಂಟೇಷನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆ ಯೊಂದಿಗೆ, ಶ್ರೀ. ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕೆ ಪೂಜೆ ಮತ್ತು ಪುಷ್ಪಾಂಜಲಿ ಸಲ್ಲಿಸುವದರೊಂದಿಗೆ ಪ್ರಾರಂಭಿಸಲಾಯಿತು , ಶ್ರೀ. ಸಚಿನ ಮಂಚಲಕರ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳು ಪ್ರಾಸ್ತಾವಿಕ ಭಾಷಣ ಮಾಡಿ ಎರಡು ದಿನಗಳಲ್ಲಿ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಓದಿದರು. ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಸಂತೋಷ ದಂಡ್ಯಾಗೋಳ ತಮ್ಮ ಮಾತುಗಳಿಂದ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತಬ್ಬಿದರು. ಉಪನ್ಯಾಸಕರುಗಳಾದ ಶ್ರೀಮತಿ. ಸ್ಪೂರ್ತಿ ಮತ್ತು ಶ್ರೀಮತಿ. ಶ್ವೇತಾ ಇವರು ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಮುಖ್ಯ ಅತಿಥಿಗಳಾದ ಶ್ರೀ. ಸಿದ್ದಾರೂಢ ಬಿ. ಕುಂಬಾರ ಮುಖ್ಯಸ್ಥರು, ವಾಣಿಜ್ಯ ವಿಭಾಗ ಮತ್ತು UUಅಒS ಸಂಯೋಜಕರು ವಿ.ವಿ. ಸಂಘ, ಬನ್ಸಿಲಾಲ್ ವಿಠಲ್ದಾಸ್ ದರ್ಬಾರ್ ಪದವಿ ಕಾಲೇಜು, ವಿಜಯಪುರ ಇವರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವುದರ ಮೂಲಕ ಓರಿಯೆಂಟೇಷನ ಕಾರ್ಯಕ್ರಮ ದ ಬಗ್ಗೆ ಅಮೂಲ್ಯವಾದ ಆಲೋಚನೆಗಳನ್ನು ಹಂಚಿಕೊAಡರು, ವಿದ್ಯಾರ್ಥಿಗಳು ಓದಿನ ಮೂಲಕ ತಮ್ಮ ಭೌತಿಕ ಶಕ್ತಿಯನ್ನು ಬೆಳಿಸಿಕೊಳಬೇಕು ಎಂದು ಮನವಿ ಮಾಡಿದರು, ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು ಇಂತಹ ಅದ್ಧೂರಿ ಕಾರ್ಯಕ್ರಮ ವನ್ನು ಆಯೋಜಿಸಿದ್ದಕ್ಕಾಗಿ ಕಾಲೇಜಿನ ಪ್ರಾಂಶುಪಾಲರಿಗೆ, ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದರು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀ . ಮನೋಜ ರ. ತಪಶೆಟ್ಟಿ ಉಪನ್ಯಾಸಕರು, ಬೌತಶಾಸ್ತ್ರ ವಿಭಾಗ ಶ್ರೀ. ರಾಮಕೃಷ್ಣ ಕಾಲೇಜು, ಅರಕೇರಿ ಇವರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ತಂತ್ರಾದ್ಯಾನದ ಪ್ರಾಮುಖ್ಯತೆ ಹಾಗೂ ಅದರ ಸದ್ಬಳಕೆ ಕುರಿತು ಮಾತನಾಡಿದರು. ಐಒS ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಶ್ರೀ. ಬಾಪುಗೌಡ ,ಶ್ರೀಮತಿ. ಸಮೀರಾ ಹುಸೇನ ಬಾಷಾ, ಮಂಜುನಾಥ ಕುಂಬಾರ ,ತಾಜ ಬಾಬಾ, ಅವಿನಾಶ್ ಟಿ, ಅನಿಲ ಬಿರಾದಾರ, ಗುರಣ್ಣಗೌಡ ಪಾಟೀಲ, ಬಸವರಾಜ ಆರ, ಶ್ರೀಮತಿ ಸಮೀರಾ, ಶ್ರೀಮತಿ ಸ್ಪೂರ್ತಿ, ಪರಶುರಾಮ ಎ, ರಮೇಶ್ ಬಗಲಿ ,ಶಿವಾನಂದ ಎಸ್, ಸಂದ್ರೇಶ, ಶಿವಕುಮಾರ ಪಿ, ಪ್ರದೀಪಕುಮಾರ ಕ್ಷತ್ರಿಯ, ಶ್ರೀಮತಿ ಶ್ವೇತಾ, ಶ್ರೀಮತಿ. ಸುಪ್ರಿಯಾ, ಮಹೇಶ ಕೆ, ಗಜು ಆರ್, ರಮೇಶ್ ಕಡೇಮನಿ, ಮಲ್ಲಿಕಾರ್ಜುನ್. ಕಾಲೇಜಿನ ಬೋಧಕೇತರ ಸಿಬ್ಬಂದಿ ರಿಯಾಜ್ ಎ, ಮಂಜುನಾಥ, ಅಂಬಣ್ಣ , ಸಂಗಣ್ಣ. ಹ ಉಪಸ್ಥಿತರಿದ್ದು.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಝಳಕಿ ಕಾಲೇಜು ಸಭಾಂಗಣದಲ್ಲಿ “ಹೊಂಬೆಳಕು” ಹೊಸ ಆರಂಭ, ಅನಂತ ಸಾಧ್ಯತೆಗಳು ಎಂಬ ಶೀರ್ಷಿಕೆಯೊಂದಿಗೆ ಓರಿಯೆಂಟೇಷನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
