ಹಸಿರು ಕ್ರಾಂತಿ : ಎಂ. ಕೆ. ಹುಬ್ಬಳ್ಳಿ : ಪಟ್ಟಣದ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಹಣಕಾಸಿನ ದುರ್ಬಳಿಕೆ ಆರೋಪಗಳ ಬಗ್ಗೆ ಸರ್ಕಾರವು ಗಂಭೀರ ಕ್ರಮ ಕೈಗೊಂಡಿದೆ. ಕಾರ್ಖಾನೆಯ ಹಿಂದಿನ ಮತ್ತು ಪ್ರಸ್ತುತ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ದೂರುಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಸೆಕ್ಷನ್ 31(1) ಅಡಿಯಲ್ಲಿ ಬೆಳಗಾವಿ ಸಹಕಾರಿ ಸಂಘಗಳ ಜಂಟಿ ನಿಬಂಧಕರಾದ ಕಲ್ಲಪ್ಪ ಓಬಣ್ಣಗೋಳ ಅವರನ್ನು ವಿಶೇಷಾಧಿಕಾರಿಯಾಗಿ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕ ಎಂ ಆರ್ ರವಿಕುಮಾರ್ ನೇಮಕ ಮಾಡಿ ಆದ್ದೇಶಿಸಿದ್ದಾರೆ.
ಇದಲ್ಲದೇ, ಕಾರ್ಖಾನೆಯಲ್ಲಿ ಸಕ್ಕರೆ ಮಾರಾಟ, ಸಾಮಗ್ರಿ ಖರೀದಿಯಲ್ಲಿ ನಡೆದ ಅವ್ಯವಹಾರ ಹಾಗೂ ಹಣ ದುರ್ಬಳಿಕೆ ಹಾಗೂ ಇತರೆ ಕಾನೂನು ಬಾಹಿರವಾಗಿ ನಡೆದಿರುವ ವಿಚಾರಗಳ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ, ಸಹಕಾರಿ ಇಲಾಖೆ ನಿವೃತ್ತ ಅಪರ ನಿಬಂಧಕ ಎಸ್. ಎಂ. ಕಲೂತಿ ಇವರಿಂದ ಜಂಟಿ ತನಿಖೆ ನಡೆಸಲು ಸರಕಾರಕ್ಕೆ ಈಗಾಗಲೇ ಸೂಚಿಲಾಗಿರುತ್ತದೆ.
ಈ ಕ್ರಮದಿಂದ ಕಾರ್ಖಾನೆಯ ಷೇರುದಾರರು, ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ಒದಗಿಸುವ ಜೊತೆಗೆ ಕಾರ್ಖಾನೆಯ ಕಾರ್ಯದಕ್ಷತೆಯನ್ನು ಪುನರ್ ಸ್ಥಾಪಿಸುವ ನಿರೀಕ್ಷೆಯಿದೆ.