2024 ರಲ್ಲಿ BSNL ಗೆ 18 ದಶಲಕ್ಷ ಗ್ರಾಹಕರಿಂದ ಗುಡ್ ಬೈ!

Ravi Talawar
2024 ರಲ್ಲಿ BSNL ಗೆ 18 ದಶಲಕ್ಷ ಗ್ರಾಹಕರಿಂದ ಗುಡ್ ಬೈ!
WhatsApp Group Join Now
Telegram Group Join Now

ನವದೆಹಲಿ04: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವೆ ಪೂರೈಕೆದಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) 18 ದಶಲಕ್ಷದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ.

ಈಗ BSNL ಗ್ರಾಹಕರ ಸಂಖ್ಯೆ 88.06 ಮಿಲಿಯನ್ ಗೆ ಇಳಿಕೆಯಾಗಿದೆ. ಭಾರತದ ಟೆಲಿಕಾಮ್ ನಿಯಂತ್ರಕ ಪ್ರಾಧಿಕಾರ(ಟ್ರಾಯ್) ನ ಮಾಹಿತಿಯ ಪ್ರಕಾರ, ಸಂಸ್ಥೆ 2024 ರ ಮಾರ್ಚ್ ತಿಂಗಳ ಒಂದರಲ್ಲೇ 2.3 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ಗ್ರಾಹಕರ ಸಂಖ್ಯೆ ಇಳಿಕೆಯಾಗುತ್ತಿರುವುದನ್ನು ತಡೆಗಟ್ಟಲು ಸಾಧ್ಯವಾಗದೇ ಇರುವ ಸಂಸ್ಥೆಗಳ ಪೈಕಿ ವೊಡಾಫೋನ್ ನಂತರದ ಸ್ಥಾನದಲ್ಲಿ ಬಿಎಸ್ಎನ್ಎಲ್ ಇದೆ.

ಉದ್ಯಮದ ತಜ್ಞರ ಪ್ರಕಾರ ಈ ಕುಸಿತಕ್ಕೆ ನೆಟ್‌ವರ್ಕ್ ಅಪ್‌ಗ್ರೇಡ್‌ಗಳಲ್ಲಿನ ಹೂಡಿಕೆಯ ಕೊರತೆ ಕಾರಣವಾಗಿದೆ. BSNL ತನ್ನ ಗ್ರಾಹಕರಿಗೆ ತನ್ನ ಹೈ-ಸ್ಪೀಡ್ 4G ಮತ್ತು 5G ನೆಟ್‌ವರ್ಕ್‌ಗಳನ್ನು ಇನ್ನೂ ಹೊರತಂದಿಲ್ಲ. ವೊಡಾಫೋನ್ ಸಂಸ್ಥೆ ಮಾರ್ಚ್ ತಿಂಗಳಲ್ಲಿ 0.68 ದಶಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಮತ್ತೊಂದೆಡೆ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 2.14 ಮಿಲಿಯನ್ ಮತ್ತು 1.76 ಮಿಲಿಯನ್ ಹೊಸ ಗ್ರಾಹಕರೊಂದಿಗೆ ಗ್ರಾಹಕರನ್ನು ಗಳಿಸಿವೆ.

BSNL ನ ಮಾರುಕಟ್ಟೆ ಪಾಲು ಮಾರ್ಚ್ 2024 ವೇಳೆಗೆ 7.57% ಕ್ಕೆ ಇಳಿದಿದೆ, ಆದರೆ ಅದರ ಪ್ರತಿಸ್ಪರ್ಧಿಗಳು, ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರು ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಂಡಿದ್ದಾರೆ. TRAI ಪ್ರಕಾರ, ರಿಲಯನ್ಸ್ ಜಿಯೋ ದೇಶದಲ್ಲಿ 40.30% ನೊಂದಿಗೆ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ನಂತರದ ಸ್ಥಾನದಲ್ಲಿ ಭಾರ್ತಿ ಏರ್‌ಟೆಲ್ 33.10% ಮತ್ತು ವೊಡಾಫೋನ್ ಐಡಿಯಾ 18.86% ಟೆಲಿಕಾಂ ಮಾರುಕಟ್ಟೆ ಪಾಲನ್ನು ಹೊಂದಿದೆ.

ವರ್ಷದುದ್ದಕ್ಕೂ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗೆ ತನ್ನ ಚಂದಾದಾರರ ನಷ್ಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಏಪ್ರಿಲ್ 2023 ರಲ್ಲಿ, BSNL ತನ್ನ ನೆಟ್‌ವರ್ಕ್ ನ್ನು ತೊರೆದ 2.99 ಮಿಲಿಯನ್ ಚಂದಾದಾರರೊಂದಿಗೆ, ಮೇ 2023 ರಲ್ಲಿ 2.81 ಮಿಲಿಯನ್ ನಷ್ಟು ಗ್ರಾಹಕರ ನಷ್ಟವನ್ನು ಅನುಭವಿಸಿದೆ ಎಂದು TRAI ಡೇಟಾ ಬಹಿರಂಗಪಡಿಸಿದೆ.

 

WhatsApp Group Join Now
Telegram Group Join Now
Share This Article