ಉತ್ತಮ ಮೌಲ್ಯಗಳೇ ಬದುಕಿಗೆ ಆಧಾರ: ಪಂಡಿತ ಪೂಜಾರಿ

Hasiru Kranti
ಉತ್ತಮ ಮೌಲ್ಯಗಳೇ ಬದುಕಿಗೆ ಆಧಾರ: ಪಂಡಿತ ಪೂಜಾರಿ
WhatsApp Group Join Now
Telegram Group Join Now

ರನ್ನ ಬೆಳಗಲಿ: ಮೇ. ೦೮.,ಪಟ್ಟಣದ ಶ್ರೀ ಗುರು ಮಹಾಲಿಂಗೇಶ್ವರ ಮಹಾವಿದ್ಯಾಲಯದಲ್ಲಿ ಗುರುವಾರದಂದು ಯುವ ರೆಡ್ ಕ್ರಾಸ್ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಂಡಿತ ಪೂಜಾರಿ ಶ್ರೀ ಗುರು ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಛೇರ್ಮನ್ನರು. ಉತ್ತಮ ಮೌಲ್ಯಗಳೇ ಬದುಕಿಗೆ ಆಧಾರ ಎಂದು ಹೇಳಿದ ಅವರು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ಸ್ವಿಟ್ಜಲ್ಯಾಂಡ್ ದೇಶದ ಜಿನೀವ ನಗರದಲ್ಲಿ ಸ್ಥಾಪನೆಗೊಂಡ ಒಂದು ಜನಸೇವಾಪರ ಸಂಸ್ಥೆ. ಜಿನೀವ ಒಪ್ಪಂದಗಳಲ್ಲಿ ಭಾಗಿಯಾಗಿರುವ ದೇಶಗಳು ಯುದ್ಧ ಕಾಲದಲ್ಲಿ ಈ ಸಂಸ್ಥೆಗೆ ಯುದ್ಧದಿಂದ ಪ್ರಭಾವಿತರಾಗಿರುವವರನ್ನು ಚಿಕಿತ್ಸೆ ನೀಡುವ ಹಕ್ಕನ್ನು ನೀಡಿತ್ತು, ಹೆನ್ರಿ ಡುನಾಂಟ್ ಅವರಿಂದ ಸ್ಥಾಪಿತವಾದ ಈ ಸಂಸ್ಥೆಗೆ ಮೂರೂ ಬಾರಿ ನೊಬೆಲ್ ಶಾಂತಿ ಪುರಸ್ಕಾರಗಳು ದೊರಕಿವೆ. ಮಾನವ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದರೆ ಜೀವನಕ್ಕೆ ಬೆಲೆ ಬರುತ್ತದೆ. ವಿದ್ಯಾರ್ಥಿಗಳು ಕಲಿಕೆಯ ಪ್ರಾರಂಭದಿಂದಲೂ ಮೌಲ್ಯಗಳನ್ನು ರೂಡಿಸಿಕೊಂಡು ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಹೊಂದಬೇಕು. ಎಂದು ರೇಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶಗಳನ್ನು ತಿಳಿಸಿ ದೇಶ ಸೇವೆ ಈಶ ಸೇವೆ, ರಾ?ದ ಪ್ರಗತಿಯೇ ಎಲ್ಲರ ಪ್ರಗತಿ ಎಂಬುದರ ಕುರಿತು ಮಾತನಾಡಿದರು.
ಪ್ರಾಚಾರ್ಯರಾದ ಪಿ ಎಚ್ ನಾಯಕ ರೆಡ್ ಕ್ರಾಸ್ ಸಂಸ್ಥೆಯ ಗುರಿ ಉದ್ದೇಶಗಳ ಕುರಿತು ವಿದ್ಯಾರ್ಥಿ ಸಮೂಹಕ್ಕೆ ಮಾಹಿತಿ ನೀಡಿದರು. ಪ್ರತಿಭಾ ಕುಂಬಾಳಿ ವಿದ್ಯಾರ್ಥಿನಿ ಕಾರ್ಯಕ್ರಮದ ಕುರಿತು ಮಾತನಾಡಿದಳು.ವೇದಿಕೆ ಮೇಲೆ ಉಪನ್ಯಾಸಕರಾದ ಎಸ್ ಜಿ ಕೆಂದುಳ್ಳಿ, ವಿ ಡಿ ಕಾಂಬ್ಳೆಕರ,ಯು ಟಿ ನ್ಯಾಮಗೌಡ ಉಪಸ್ಥಿತರಿದ್ದು. ಕಾರ್ಯಕ್ರಮದ ನಿರೂಪಣೆಯನ್ನು ಲಕ್ಕಪ್ಪ ಪೂಜಾರಿ, ವೇದಿಕೆಗೆ ಈಶ್ವರ ಆಲಕುನೂರ ಸ್ವಾಗತಿಸಿದನು. ಮುತ್ತಪ್ಪ ಜಾಲಿಕಟ್ಟಿ ಕಾರ್ಯಕ್ರಮಕ್ಕೆ ವಂದನೆ ಸಲ್ಲಿಸಿದನು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article