ರನ್ನ ಬೆಳಗಲಿ:ಸೆ.೦೮,.ಜಿಲ್ಲಾ ಪಂಚಾಯತ್ ಬಾಗಲಕೋಟೆ, ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗ ಮುಧೋಳ,ಸನ್ ೨೦೨೪-೨೫ ನೇ ಸಾಲಿನ ಲೆಕ್ಕ ಶಿರ್ಷಿಕೆ ೫೦೫೪ ರಡಿ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ ಮತ್ತು ಚರಂಡಿ ನಿರ್ಮಾಣ ಅನುದಾನದಡಿ ರನ್ನ ಬೆಳಗಲಿ-ಜಗದಾಳ ರಸ್ತೆ ಕಿ.ಮೀ ೦.೦೦ ದಿಂದ ೦.೮೦ ರವರೆಗೆ ಒಂದು ಕೋಟಿ ರೂಪಾಯಿ ಮೊತ್ತದ ಕಾಂಕ್ರೀಟ ರಸ್ತೆ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮವು ಶ್ರೀ ಬಂದ ಲಕ್ಷ್ಮೀ ಪಾದಗಟ್ಟೆ ಹತ್ತಿರ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿದ ಆರ್ ಬಿ ತಿಮ್ಮಪೂರ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಉತ್ತಮ ರಸ್ತೆಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿವೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ದಿನನಿತ್ಯ ಸಾರಿಗೆ ಸುಗಮಗೊಳ್ಳುವಲ್ಲಿ ರಸ್ತೆಗಳು ಮುಖ್ಯ ಪಾತ್ರ ವಹಿಸುತ್ತವೆ. ನಮ್ಮ ಸರಕಾರ ಜನಪರ ಸರಕಾರ ಪ್ರತಿ ನಾಗರಿಕರ ಮೂಲಭೂತ ಅವಶ್ಯಕತೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಪರಮ್ ಪೂಜ್ಯ ಸಿದ್ದರಾಮ ಶಿವಯೋಗಿಗಳು ಸಿದ್ಧಾರೂಢಾಶ್ರಮ ಮುಧೋಳ ಸಚಿವರು ನುಡಿದಂತೆ ನಡೆಯುತ್ತಿದ್ದಾರೆ.ರನ್ನ ಬೆಳಗಲಿ ಪಟ್ಟಣದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಅಭಿವೃದ್ಧಿಪಥದಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಮುಧೋಳ ತಾಲೂಕಾ ಓಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗಪ್ಪ ಅಮಾತಿ ನಿರಂತರ ಮಳೆಯಿಂದಾಗಿ ಮುಂದಿನ ದಿನಗಳಲ್ಲಿ ರಸ್ತೆಯು ಹಾಳಾಗಬಾರದೆಂದು ಅತ್ಯುತ್ತಮ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ ಮಾನ್ಯ ಸಚಿವರಿಗೆ ನಮ್ಮ ಪಟ್ಟಣದ ಜನರು ಚಿರುಋಣಿಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಧೋಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ತಾಲೂಕಾ ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ಜಿಲ್ಲಾ ಓಬಿಸಿ ಅಧ್ಯಕ್ಷ ಮುದಕಣ್ಣ ಅಂಬಿಗೇರ, ಪ.ಪಂ ಸದಸ್ಯರಾದ ಪ್ರವೀಣ ಪಾಟೀಲ, ಮುತ್ತು ಸನ್ನಟ್ಟಿ, ನೀಲಕಂಠ ಸೈದಾಪುರ, ಮುಬಾರಕ್ ಅತ್ತಾರ, ಮುಖಂಡರಾದ ಎಚ್ ಎ ಕಡಪಟ್ಟಿ, ಈರಪ್ಪ ಕಿತ್ತೂರ, ಮಾಲಿಂಗಪ್ಪ ಕೊನ್ನೂರ, ಮಲ್ಲಪ್ಪ ಮಲಾವಡಿ, ಶಿವಪ್ಪ ಮಂಟೂರ, ಅಪ್ಪಯ್ಯಪ್ಪ ಪೂಜಾರಿ, ಮುದುಕಪ್ಪ ದೋಬಸಿ,ದುಂಡಪ್ಪ ಪೂಜಾರಿ, ಸುಭಾ? ಪುರಾಣಿಕ, ನಿಂಗಪ್ಪ ಪೂಜಾರಿ, ಸೋಮಲಿಂಗ ಸನ್ನಟ್ಟಿ, ಸವಿತಾ ಚವಲಿ ಇನ್ನಿತರರು ಹಾಜರಿದ್ದರು.