ಸಂಕೇಶ್ವರ,ಏ.16: : ಸ್ಥಳೀಯ ಶ್ರೀ ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲದ ವಿಧ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಹೇಶ ಕಾರ್ತಿಕ ಪಾಟೀಲ ಶೇ.೯೮ (ಪ್ರಥಮ), ಸಮಿಯಾ ಡಿ ನಾಯಿಕವಾಡಿ ಶೇ.೯೭.೫(ದ್ವಿತೀಯ), ಸೌಮ್ಯ ಅರೇರ ಶೇ.೯೭.೩೩(ತೃತೀಯ). ವಾಣಿಜ್ಯ ವಿಭಾಗದಲ್ಲಿ ಪ್ರಾಜಕ್ತಾ ಠಾಣೆ ಶೇ.೯೬.೫೦(ಪ್ರಥಮ), ಅನನ್ಯಾ ಧಗಟೆ ಶೇ.೯೬.೧೬(ದ್ವೀತಿಯ) ಶ್ವೇತಾ ಪವಾರ್ ಶೇ.೯೬(ತೃತೀಯ), ಕಲಾ ವಿಭಾಗದಲ್ಲಿ ಲಕ್ಷ್ಮಿ ಗಡಕರಿ ಶೇ.೯೪.೩೩(ಪ್ರಥಮ), ನರ್ಗಿಸ್ ಖಾನದಾಲೆ ಶೇ.೯೩.೬೭(ದ್ವೀತಿಯ),ಸೃಷ್ಟಿ ಖೋತ್ ೯೩.೬೭(ತೃತೀಯ) ಒಟ್ಟು ೩೫ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ ೧೦೦ಕ್ಕೆ೧೦೦ ಅಂಕ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎ ಬಿ.ಪಾಟೀಲ ಮಾತನಾಡಿ ಕಾಲೇಜಿನ ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಕಾಶಿನಾಥ ಶಿರಕೋಳಿ, ನಿರ್ದೇಶಕರಾದ ಆರ್. ಬಿ. ಪಾಟೀಲ, ಬಾಳಾಸಾಹೇಬ ವೈರಾಗಿ, ಡಾ. ಗಣೇಶ ಪಾಟೀಲ, ಆಡಳಿತದಿಕಾರಿ ಬಿ. ಎ. ಪೂಜಾರಿ, ಪ್ರಾಚಾರ್ಯೆ ಸರ್ವಮಂಗಳಾ ಯರಗಟ್ಟಿ ಪ್ರಾಧ್ಯಾಪಕರು, ಪ್ರಾಚಾರ್ಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.